ಸಿಪಿಇಸಿ ಹಳಿ ತಪ್ಪಿಸಲು ಭಾರತದಿಂದ ಕುಲಭೂಷಣ್ ಬಳಕೆ: ಪಾಕ್

ಕರಾಚಿ, ಸೆ. 12: ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (ಸಿಪಿಇಸಿ)ನ ಹಳಿತಪ್ಪಿಸಲು ಭಾರತ ಕುಲಭೂಷಣ್ ಜಾಧವ್ ಪ್ರಕರಣವನ್ನು ಬಳಸುತ್ತಿರುವುದರಿಂದ, ಈ ಪ್ರಕರಣವನ್ನು ಪಾಕಿಸ್ತಾನ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಪರಿಣಾಮಕಾರಿಯಾಗಿ ನಡೆಸುತ್ತಿದೆ ಎಂದು ಆ ದೇಶದ ಆಂತರಿಕ ಸಚಿವ ಅಹ್ಸಾನ್ ಇಕ್ಬಾಲ್ ಮಂಗಳವಾರ ಹೇಳಿದ್ದಾರೆ.
47 ವರ್ಷದ ಭಾರತದ ಮಾಜಿ ನೌಕಾಪಡೆ ಅಧಿಕಾರಿ ಜಾಧವ್‌ಗೆ ಪಾಕಿಸ್ತಾನದ ಸೇನಾ ನ್ಯಾಯಾಲಯ ಎಪ್ರಿಲ್‌ನಲ್ಲಿ ಮರಣ ದಂಡನೆ ವಿಧಿಸಿದೆ. ಅವರ ವಿರುದ್ಧದ ಬೇಹುಗಾರಿಕೆ ಮತ್ತು ಭಯೋತ್ಪಾದನೆ ಆರೋಪಗಳು ನ್ಯಾಯಾಲಯದ ರಹಸ್ಯ ವಿಚಾರಣೆಯಲ್ಲಿ ಸಾಬೀತಾಗಿದೆ ಎಂದು ಸೇನೆ ತಿಳಿಸಿದೆ.
ಚೀನಾ ಮತ್ತು ಪಾಕಿಸ್ತಾನಗಳ ನಡುವಿನ ಅಭೂತಪೂರ್ವ ಸ್ನೇಹದ ಫಲವಾಗಿ ಸಿಪಿಇಸಿ ರೂಪುಗೊಂಡಿದೆ ಎಂದು ಸಚಿವರು ಹೇಳಿದರು.
Next Story





