ಹೊನ್ನಾವರ : ಅರಣ್ಯ ಸಮಿತಿ ಸದಸ್ಯರಿಗೆ ಉಚಿತ ಗ್ಯಾಸ್ ವಿತರಣೆ

ಹೊನ್ನಾವರ,ಸೆ.13 ; ತಾಲೂಕಿನ ಸರಳಗಿಯಲ್ಲಿ ಗ್ರಾಮ ಅರಣ್ಯ ಸಮಿತಿ ಸದಸ್ಯರಿಗೆ ಎಲ್.ಪಿ.ಜಿ ಉಚಿತ ಗ್ಯಾಸ್ ವಿತರಣಾ ಕಾರ್ಯಕ್ರಮವನ್ನು ಶಾಸಕ ಮಂಕಾಳು ವೈದ್ಯ ನೆರವೇರಿಸಿದರು,
ನಂತರ ಮಾತನಾಡಿದ ಅವರು, ಅರಣ್ಯ ಸಮಿತಿ ರಚಿಸಿ ಕಾಡುಗಳ ರಕ್ಷಣೆಗೆ ಇಲಾಖೆಗೆ ಸಹಕಾರ ನೀಡಬೇಕು ನಮ್ಮ ಜಿಲ್ಲೆಯಲ್ಲಿರುವ ಅರಣ್ಯ ಪ್ರದೇಶ ಬೇರೆ ಯಾವ ಜಿಲ್ಲೆಯಲ್ಲಿಯೂ ಇಲ್ಲ, ಅಡುಗೆಗೆ ಉರುವಲು ಬಳಸುವುದನ್ನು ಕಡಿಮೆ ಮಾಡುವ ಸಲುವಾಗಿ ನಮ್ಮ ಸರ್ಕಾರ ಉಚಿತ ಗ್ಯಾಸ್ ವಿತರಣೆ ಮಾಡುತ್ತಿದೆ ಎಂದರು.
ಈ ಸಂದರ್ಭದಲ್ಲಿ ಉಲ್ಲಾಸ ನಾಯ್ಕ, ಪುಷ್ಪಾ ನಾಯ್ಕ, ಯೋಗೇಶ ರಾಯ್ಕರ್, ಸಂಗೀತಾ ಉಪ್ಪಾರ, ಗಣೇಶ್ ನಾಯ್ಕ, ಪ್ರಶಾಂತ ನಾಯ್ಕ, ಹುಸೇನ ಮೊದಲಾದ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.
Next Story





