ಉಡುಪಿಯಲ್ಲಿ ‘ಅಲಾರೆ ಗೋವಿಂದ’
ಉಡುಪಿ, ಸೆ.13: ವಿಟ್ಲಪಿಂಡಿಯ ಪ್ರಯುಕ್ತ ಮುಂಬಯಿಯ ಪ್ರಸಿದ್ಧ ದಹಿಹಂಡಿ ಖ್ಯಾತಿಯ ಬಾಲಮಿತ್ರ ವ್ಯಾಯಾಮ ಶಾಲೆ ಸಾಂತಾಕ್ರೂಜ್ ತಂಡದಿಂದ ಉಡುಪಿಯ ನಾನಾ ಕಡೆಗಳಲ್ಲಿ ಬೃಹತ್ ಮೊಸರು ಕುಡಿಕೆ ಒಡೆಯುವ ಕಾರ್ಯಕ್ರಮ ನಡೆಯಲಿದೆ.
ಕಿದಿಯೂರು ಉದಯಕುಮಾರ್ ಶೆಟ್ಟಿ ಪ್ಯಾಮಿಲಿ ಟ್ರಸ್ಟ್‌ನ ಅಂಗ ಸಂಸ್ಥೆ ಆಲಾರೆ ಗೋವಿಂದ ಸಾಂಸ್ಕೃತಿಕ ವೇದಿಕೆ ದೂರದ ಮುಂಬಯಿಯಿಂದ ಈ ತಂಡವನ್ನು ಕರೆಸುತ್ತಿದೆ. ಈ ಕಾರ್ಯಕ್ರಮವನ್ನು ಶ್ರೀಕೃಷ್ಣ ಮಠದ ಪಾರ್ಕಿಂಗ್ ಪ್ರದೇಶದಲ್ಲಿ ಬೆಳಿಗ್ಗೆ 8:30ಕ್ಕೆ ಪರ್ಯಾಯ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು ಉದ್ಘಾಟಿಸಲಿದ್ದಾರೆ.
ಪೇಜಾವರ ಕಿರಿಯ ಯತಿಗಳಾದ ಶ್ರೀವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಉಪಸ್ಥಿತರಿದ್ದು, ಅಧ್ಯಕ್ಷತೆಯನ್ನು ನಾಡೋಜ ಡಾ. ಜಿ. ಶಂಕರ್ ವಹಿಸಲಿದ್ದಾರೆ. ಎಂದು ಟ್ರಸ್ಟ್‌ನ ಪ್ರಕಟನೆ ತಿಳಿಸಿದೆ.
Next Story





