ಬ್ರಿಟಿಶ್ ವರ್ಜಿನ್ ಐಲ್ಯಾಂಡ್‌ನಲ್ಲಿ 100 ಕೈದಿಗಳು ಪರಾರಿ

ಲಂಡನ್, ಸೆ. 13: ‘ಇರ್ಮಾ’ ಚಂಡಮಾರುತದ ದಾಂಧಲೆಯ ವೇಳೆ ಬ್ರಿಟಿಶ್ ವರ್ಜಿನ್ ಐಲ್ಯಾಂಡ್ಸ್‌ನಲ್ಲಿ 100ಕ್ಕೂ ಅಧಿಕ ಅತ್ಯಂತ ಅಪಾಯಕಾರಿ ಕೈದಿಗಳು ಪರಾರಿಯಾಗಿದ್ದಾರೆ ಎಂದು ಬ್ರಿಟನ್‌ನ ಸಹಾಯಕ ವಿದೇಶ ಸಚಿವ ಅಲನ್ ಡಂಕನ್ ಮಂಗಳವಾರ ಸಂಸತ್ತಿಗೆ ತಿಳಿಸಿದರು.
ಚಂಡಮಾರುತದಿಂದಾಗಿ ಬ್ರಿಟಿಶ್ ಭೂಭಾಗಗಳಲ್ಲಿ ಸಂಭವಿಸಿದ ಸಾವಿನ ಸಂಖ್ಯೆ 9ಕ್ಕೆ ಏರಿದೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.
‘‘ಬ್ರಿಟಿಶ್ ವರ್ಜಿನ್ ಐಲ್ಯಾಂಡ್‌ನಲ್ಲಿ ಕಾನೂನು ವ್ಯವಸ್ಥೆ ಸಂಪೂರ್ಣ ಕುಸಿದುಬೀಳುವ ಬೆದರಿಕೆಯನ್ನು ನಾವು ಎದುರಿಸಿದ್ದೆವು’’ ಎಂದು ಅವರು ಹೇಳಿದರು.
‘‘ಜೈಲು ಕಟ್ಟಡ ಬಿರುಕುಬಿಟ್ಟ ಬಳಿಕ ನೂರಕ್ಕೂ ಅಧಿಕ ಅಪಾಯಕಾರಿ ಕೈದಿಗಳು ಪರಾರಿಯಾಗಿದ್ದಾರೆ’’ ಎಂದರು.
Next Story





