ಸೋನಾಲಿಕಾ ಸೀಕಂದರ್ ಟ್ರಾಕ್ಟರ್ ಬಿಡುಗಡೆ

ಚಾಮರಾಜನಗರ, ಸೆ. 13: ರೈತರು ವ್ಯವಸಾಯದಲ್ಲಿ ನೂತನ ತಾಂತ್ರಿಕತೆಯನ್ನು ಆಳವಡಿಸಿಕೊಂಡು ಬದಲಾವಣೆಯನ್ನು ಬಯಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಮೇಕಿಂಗ್ ಇಂಡಿಯಾ ಹಾಗೂ ಸ್ವದೇಶಿ ವಸ್ತುಗಳ ಬಳಕೆ ಬಗ್ಗೆ ಹೆಚ್ಚು ಜಾಗೃತರಾಗಬೇಕು ಎಂದು ಸ್ಟೇಟ್ ಬ್ಯಾಂಕ್ ಅಪ್ ಇಂಡಿಯಾದ ನಗರ ಶಾಖೆಯ ಮ್ಯಾನೇಜರ್ ಎಂ.ಲತಾ ತಿಳಿಸಿದರು.
ನಗರದ ನಂಜನಗೂಡು ರಸ್ತೆಯಲ್ಲಿರುವ ಈಶ್ವರಿ ಟ್ರಾಕ್ಟರ್ಸ್‍ನಿಂದ ಇಂಟರ್‍ನ್ಯಾಷನಲ್ ಟ್ಯಾಕ್ಟರ್ ಕಂಪನಿಯ ನೂತನ ಸೋನಾಲಿಕಾ ಸೀಕಂದರ್ ಟ್ರಾಕ್ಟರ್ ಅನ್ನು ಬಿಡುಗಡೆ ಮಾಡಿ, ಜಿಲ್ಲೆಯ ಪ್ರಥಮ ರೈತರಿಗೆ ಟ್ರಾಕ್ಟರ್ ಕೀಯನ್ನು ವಿತರಣೆ ಮಾಡಿ ಅವರು ಮಾತನಾಡಿದರು.
ರೈತರು ಈ ದೇಶದ ಅನ್ನದಾತರರು. ಅವರಿಗೆ ಸೂಕ್ತ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟು ವ್ಯವಸಾಯದಲ್ಲಿ ಮುನ್ನಡೆ ಸಾಧಿಸಿದರೆ ಮಾತ್ರ ಇತರೇ ಕ್ಷೇತ್ರಗಳಲ್ಲಿ ಬೆಳವಣಿಗೆ ಹೊಂದಲು ಸಾಧ್ಯವಿದೆ.
ಈ ನಿಟ್ಟಿನಲ್ಲಿ ದೇಶದಲ್ಲಿ ಮೂರನೇ ಸ್ಥಾನದಲ್ಲಿರುವ ಸೋನಾಲಿಕಾ ಟ್ಯಾಕ್ಟರ್ ಕಂಪನಿ ರೈತರಿಗೆ ಅನುಗುಣವಾಗಿ ಟ್ಯಾಕ್ಟರ್‍ಗಳನ್ನು ವಿನ್ಯಾಸಗೊಳಿಸಿ ಮಾರುಕಟ್ಟೆ ಬಿಡುಗಡೆ ಮಾಡಿದೆ. ಇದನ್ನು ಖರೀದಿಸುವ ಮೂಲಕ ಬೇಸಾಯದಲ್ಲಿ ತೊಡಗಿಸಿಕೊಂಡು ಅರ್ಥಿಕ ಅಭಿವೃದ್ದಿ ಸಾಧಿಸಬೇಕು. ಇದಕ್ಕಾಗಿ ಎಸ್‍ಬಿಐ ಎಲ್ಲಾ ರೀತಿಯ ನೆರವು ನೀಡಲು ಸಿದ್ದವಿದೆ ಎಂದು ತಿಳಿಸಿದರು.
ರೈತರು ಕಡಿಮೆ ಬಡ್ಡಿಯಲ್ಲಿ ಸಾಲ ನೀಡುವ ನಮ್ಮಂಥ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ಸಾಲ ಪಡೆದು ಟ್ಯಾಕ್ಟರ್‍ಗಳನ್ನು ಖರೀದಿ ಮಾಡಿದರೆ ಒಳಿತು. ಖಾಸಗಿ ಕಂಪನಿಗಳಲ್ಲಿ ದುಬಾರಿ ಬಡ್ಡಿ ನೀಡಿ ಸಾಲ ಪಡೆದು, ಬ್ಯಾಂಕ್‍ಗಳಿಗೆ ಸಾಲ ಕಟ್ಟಲು ಸಾಧ್ಯವಾಗದ ಪರಿಸ್ಥಿತಿಗೆ ಬರುವುದು ಬೇಡ. ಹೀಗಾಗಿ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುವ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ಸಾಲ ಪಡೆದುಕೊಳ್ಳಿ. ಜೊತೆಗೆ ಪಡೆದ ಸಾಲವನ್ನು ಸಕಾಲದಲ್ಲಿ ಮರು ಪಾವತಿ ಮಾಡಿ, ಆರ್ಥಿಕ ಅಭಿವೃದ್ದಿಯನ್ನು ಸಾಧಿಸಬೇಕು ಎಂದು ಲತಾ ಕಿವಿಮಾತು ಹೇಳಿದರು.
ಇಂಟರ್‍ನ್ಯಾಷನಲ್ ಟ್ಯಾಕ್ಟರ್ ಕಂಪನಿಯ ಕರ್ನಾಟಕ ಪ್ರಾದೇಶಿಕ ಮುಖ್ಯಸ್ಥ ರಾಮ್‍ಗೋಪಾಲ್ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇಶದಲ್ಲಿ ಹೆಚ್ಚು ಟ್ಯಾಕ್ಟರ್ ಉತ್ಪಾಧನೆ ಮಾಡುವ ಬಹುದೊಡ್ಡ ಕಂಪನಿ ನಮ್ಮದು, ರೈತರಿಗೆ ಅತ್ಯವಶ್ಯಕವಾದ ಸುಧಾರಿತ ಸಿಕಂದರ್ ಹೆವಿ ಡ್ಯೂಟಿ ಟ್ಯಾಕ್ಟರ್ ಅನ್ನು ಪ್ರಪಂಚದ್ಯಾಂತ ಬಿಡುಗಡೆ ಮಾಡಿದ್ದೇವೆ. ಕರ್ನಾಟಕದಲ್ಲಿ ಪ್ರಥಮವಾಗಿ ಚಾಮರಾಜನಗರ ಜಿಲ್ಲೆಯಲ್ಲಿ ಬಿಡುಗಡೆ ಮಾಡುತ್ತಿರುವುದು ಸಂತಸ ತಂದಿದೆ. ರೈತರು ಕಂಪನಿಯ ಟ್ಯಾಕ್ಟರ್ ಅನ್ನು ಖರೀದಿಸುವ ಮೂಲಕ ಇದರ ಲಾಭವನ್ನು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ದೇಶದ ಅರ್ಥಿಕ ಅಭಿವೃದ್ದಿಯಲ್ಲಿ ನಮ್ಮ ಕಂಪನಿ ಹೆಚ್ಚಿನ ಸಹಕಾರ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಘೋಷಣೆಯಂತೆ ಮೇಕಿಂಗ್ ಇಂಡಿಯಾದಲ್ಲಿ ಬಾಗಿಯಾಗಿದೆ. ಭಾರತ ಅಲ್ಲದೇ ವಿದೇಶದಲ್ಲಿಯೂ ಸೋನಾಲಿಕಾ ಕಂಪನಿಯ ಟ್ಯಾಕ್ಟರ್‍ಗೆ ಉತ್ತಮ ಬೇಡಿಕೆ ಇದೆ. ಈಗ ಉದ್ಘಾಟನೆಗೊಂಡಿರುವ ಸಿಕಂದರ್ ಟ್ಯಾಕ್ಟರ್ ರೈತರ ಸ್ನೇಹಿಯಾಗಿದ್ದು, ರೈತರು ಹಾಗೂ ಟ್ರಾಕ್ಟರ್ ಚಾಲಕರ ಅಭಿಪ್ರಾಯಗಳನ್ನು ಸಂಗ್ರಹಿಸಿ 61 ಹೊಸ ಅಂಶಗಳನ್ನು ವಿನ್ಯಾಸಗೊಳಿಸಲಾಗಿದೆ. ಹೀಗಾಗಿ ಅತ್ಯಂತ ಶಕ್ತಿಶಾಲಿ, ಅತ್ಯುತ್ತಮ ಮೈಲೇಜ್, ಉತ್ತಮ ವೇಗ, ಹೆಚ್ಚಿನ ಲಿಪ್ಟಿಂಗ್ ಸಾಮಥ್ರ್ಯ, ಹೆಚ್ಚು ಸುರಕ್ಷತೆ, ಕನಿಷ್ಟ ನಿರ್ವಹಣಾ ವೆಚ್ಚದೊಂದಿಗೆ ನೂತನ ತಂತ್ರಜ್ಞಾನವನ್ನು ಅಳವಡಿಸಿ, ಸೋನಾಲಿಕಾ ಸಿಕಂದರ್ ಆರ್‍ಎಕ್ಸ್ -35 ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ರೈತರು ಹೆಚ್ಚಿನ ಸಹಕಾರ ನೀಡಬೇಕು ಎಂದು ರಾಮ್‍ಗೋಪಾಲ್ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಪ್ರೊ. ಕೆ.ಆರ್. ಮಲ್ಲಿಕಾರ್ಜುನಪ್ಪ, ಜಿ.ಪಂ. ಸದಸ್ಯ ಸಿ.ಎನ್. ಬಾಲರಾಜು, ಬಿಎಸ್‍ಬಿಎನ್ ಅಧ್ಯಕ್ಷ ಉಡಿಗಾಲಕುಮಾರಸ್ವಾಮಿ, ಮೈಮುಲ್ ಮಾಜಿ ನಿರ್ದೇಶಕ ಎಚ್.ಎಸ್. ಬಸವರಾಜು, ಎಂ.ಬಸವಣ್ಣ, ಕೋಡಿಮೋಳೆ ರಾಜಶೇಖರ್, ತಾ.ಪಂ. ಮಾಜಿ ಸದಸ್ಯ ಗೌಡಿಕೆ ಮಾದಪ್ಪ, ವಲಯ ಮ್ಯಾನೇಜರ್ ಬಸವರಾಜುಹಳ್ಳಿ, ಸರ್ವೀಸ್ ಮ್ಯಾನೇಜರ್ ಮೃಂತ್ಯುಜಯ, ಡೀಲರ್‍ಗಳಾದ ಎನ್.ಜಿ. ಪ್ರಶಾಂತ್, ಆಶೋಕ್ ಮೊದಲಾದವರು ಇದ್ದರು.







