ಈಜು ಸ್ಪರ್ಧೆ: ಫಿಲೋಮಿನಾ ಕಾಲೇಜಿನ ಆರು ಮಂದಿ ರಾಜ್ಯ ಮಟ್ಟಕ್ಕೆ ಆಯ್ಕೆ

ಪುತ್ತೂರು, ಸೆ. 13: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜಿನ ಆಶ್ರಯದಲ್ಲಿ ಜರಗಿದ ಪದವಿ ಪೂರ್ವ ಕಾಲೇಜುಗಳ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಈಜು ಸ್ಪರ್ಧೆಯಲ್ಲಿ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಬಾಲಕರ ಹಾಗೂ ಬಾಲಕಿಯರ ಈಜು ತಂಡಗಳು ದ್ವಿತೀಯ ಸಮಗ್ರ ಪ್ರಶಸ್ತಿಯನ್ನು ಪಡೆದಿದೆ.ಕಾಲೇಜಿನ ಒಟ್ಟು ಆರು ಮಂದಿ ಈಜು ಪಟುಗಳು ಬೆಂಗಳೂರಿನಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಈಜು ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ರಾಯ್ಸ್ಟನ್ ರೋಡ್ರಿಗಸ್ ಅವರು 3 ಚಿನ್ನ ಮತ್ತು 2 ಬೆಳ್ಳಿ, ಪ್ರಥಮ ವಾಣಿಜ್ಯ ವಿಭಾಗದ ತ್ರಿಶೂಲ್‌ಅವರು 1 ಚಿನ್ನ ಮತ್ತು 3 ಬೆಳ್ಳಿ, ದ್ವಿತೀಯ ವಾಣಿಜ್ಯ ವಿಭಾಗದ ಜೈ ಶ್ಯಾಮ್ ಭಟ್ ಅವರು 3 ಬೆಳ್ಳಿ ಮತ್ತು 1 ಕಂಚು, ಪ್ರಥಮ ವಿಜ್ಞಾನ ವಿಭಾಗದ ಆಶ್ರಿತ್ ಅವರು 1 ಕಂಚು, ಪ್ರಥಮ ವಿಜ್ಞಾನ ವಿಭಾಗದ ಶೇನ್ ಜೋಸೆಫ್ ಡಿ’ಸೋಜಾ ಅವರು 1 ಬೆಳ್ಳಿ, ಪ್ರಥಮ ವಿಜ್ಞಾನ ವಿಭಾಗದ ಆಶ್ಲೆ ಬ್ರಯಾನ್ ಲೋಬೋ ಅವರು 1ಬೆಳ್ಳಿ, ದ್ವಿತೀಯ ವಿಜ್ಞಾನ ವಿಭಾಗದ ಶ್ರೀಲಕ್ಷ್ಮಿ ಶೆಟ್ಟಿ ಅವರು 3 ಚಿನ್ನ ಮತ್ತು 1 ಬೆಳ್ಳಿ , ಪ್ರಥಮ ವಾಣಿಜ್ಯ ವಿಭಾಗದ ಸಿಂಚನಾ ಗೌಡ ಅವರು 2 ಚಿನ್ನ, 2 ಬೆಳ್ಳಿ ಮತ್ತು 1 ಕಂಚು, ಪ್ರಥಮ ವಿಜ್ಞಾನ ವಿಭಾಗದ ಜೇನ್ ನಿನ್ಹಾ ಕುಟಿನ್ಹಾ ಅವರು 4 ಬೆಳ್ಳಿ ಮತ್ತು 1 ಕಂಚು , ದ್ವಿತೀಯ ವಾಣಿಜ್ಯ ವಿಭಾಗದ ವರ್ಷಿಣಿ ಎಫ್ ಜಿ ಅವರು 1 ಚಿನ್ನ, 1 ಬೆಳ್ಳಿ ಮತ್ತು 1 ಕಂಚು ಪಡೆದಿದ್ದಾರೆ.
ಕಾಲೇಜಿನ ಈ ಈಜು ತಂಡಕ್ಕೆ ಪಾರ್ಥ ವಾರಣಾಸಿ, ವಸಂತ ಕುಮಾರ್ ಹಾಗೂ ನಿರೂಪ್ ಜಿ. ಆರ್ ಪುತ್ತೂರಿನ ಶಿವರಾಮ ಕಾರಂತ ಈಜುಕೊಳದಲ್ಲಿ ತರಬೇತಿ ನೀಡಿದ್ದರು. ಕಾಲೇಜಿನ ಪ್ರಾಂಶುಪಾಲ ವಿಜಯ್ ಲೋಬೊ ಮತ್ತು ದೈಹಿಕ ಶಿಕ್ಷಣ ನಿರ್ದೇಶಕ ಪ್ರಕಾಶ್ ಡಿ’ಸೋಜ ಸಾಧನೆಗೈದ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.





