ನಾಪೋಕ್ಲು : ಸೆ.15 ರಂದು ಉಚಿತ ಅಡುಗೆ ಅನಿಲ ವಿತರಣೆ

ನಾಪೋಕ್ಲು,ಸೆ.13 : ಕೇಂದ್ರ ಸರಕಾರದ ಮಹತ್ವಕಾಂಕ್ಷಿ ಉಜ್ವಲ ಯೋಜನೆಯಡಿಯಲ್ಲಿ ಬಿ.ಪಿ.ಎಲ್. ಕಾರ್ಡುದಾರರಿಗೆ ಉಚಿತ ಅಡುಗೆ ಅನಿಲ ಗ್ಯಾಸ್ ವಿತರಣೆ ಕಾರ್ಯಕ್ರಮವು ತಾರೀಕು 15 ರ ಶುಕ್ರವಾರ ನಾಪೋಕ್ಲು ಕೊಡವ ಸಮಾಜದಲ್ಲಿ ನಡೆಯಲಿದೆ. ಎಂದು ಜಿಲ್ಲಾ ಪಂಚಾಯತ್ ಸದಸ್ಯ ಮುರುಳೀಧರ್ ರವರು ತಿಳಿಸಿದರು.
ನಾಪೋಕ್ಲು ನಗರದ ತಮ್ಮ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಕಾರ್ಯಕ್ರಮಕ್ಕೆ ಮೈಸೂರು – ಕೊಡಗು ಲೋಕಸಭಾ ಸದಸ್ಯರಾದ ಪ್ರತಾಪ್ ಸಿಂಹ, ವಿರಾಜಪೇಟೆ ಶಾಸಕರಾದ ಕೆ.ಜಿ.ಬೋಪಯ್ಯ, ಎಂ.ಎಲ್.ಸಿ. ಸುನೀಲ್ ಸುಬ್ರಮಣಿ, ಕೇಂದ್ರ ಸರಕಾರದ ಪುರಸ್ಕೃತ ಯೋಜನೆಯ ನಿರ್ದೇಶಕ ಅಪ್ಪಚೇಟ್ಟೋಳಂಡ ಮನು ಮುತ್ತಪ್ಪ, ಜಿಲ್ಲಾ ಪಂಚಾಯತ್ ಅಧ್ಯಕ್ಷ ಬಿ.ಎ. ಹರೀಶ್, ತಾಲೋಕು ಪಂಚಾಯತ್ ಅಧ್ಯಕ್ಷೆ ಶೋಭಾ ಮೋಹನ್, ಉಪಾದ್ಯಕ್ಷ ಸಂತು ಸುಬ್ರಮಣಿ, ಜಿಲ್ಲಾ ಪಂಚಾಯತ್ ಸದಸ್ಯ ನೆಲ್ಲಚಂಡ ಕಿರಣ್ ಕಾರ್ಯಪ್ಪ, ಮತ್ತಿತರು ಭಾಗವಹಿಸಲಿರುವರು, ಈ ಸಂದರ್ಭ ಸಂಸದರು, ಮತ್ತು ಶಾಸಕರು ಸಾರ್ವಜನಿಕರ ಅವಹಾಲನ್ನು ಸ್ವೀಕರಿಸಲಿರುವರು ಸಾರ್ವಜನಿಕರು ಮತ್ತು ನಾಪೋಕ್ಲು, ಚೆಯ್ಯಂಡಾಣೆ, ಬಲ್ಲಮಾವಟಿ, ಹೊದವಾಡ ಗ್ರಾಮ ಪಂಚಾಯಿತಿಯ ಅಧ್ಯಕ್ಷರುಗಳು, ಉಪಾಧ್ಯಕ್ಷರುಗಳು, ಸದಸ್ಯರುಗಳು ಭಾಗವಹಿಸಬೇಕೆಂದು ಕೋರಿದ್ದಾರೆ.
ಪತ್ರಿಕಾ ಗೋಷ್ಠಿಯಲ್ಲಿ ಆರ್,ಎಂ.ಸಿ.ಸದಸ್ಯ, ವಲಯ ಬಿ.ಜೆ.ಪಿ. ಅಧ್ಯಕ್ಷ ಶಿವಚಾಳಿಯಂಡ ಅಂಬಿ ಕಾರ್ಯಪ್ಪ, ಗ್ರಾಮ ಪಂಚಾಯತ್ ಸದಸ್ಯ ಶಿವಚಾಳಿಯಂಡ ಜಗದೀಶ್, ಬಿ.ಜೆ.ಪಿ. ಪ್ರಕೋಷ್ಠದ ಸಹ ಸಂಚಾಲಕ ಪಾಡಿಯಮ್ಮಂಡ ಮನು ಮಹೇಶ್, ಬಿ.ಜೆ.ಪಿ. ಪ್ರಧಾನ ಕಾರ್ಯದರ್ಶಿ ಕನ್ನಂಬೀರ ಸುಧಿ ತಿಮ್ಮಯ್ಯ, ಮಾಜಿ ಬಿ.ಜೆ.ಪಿ.ಅಧ್ಯಕ್ಷ ಕುಂಡ್ಯೋಳಂಡ ರಮೇಶ್ ಮುದ್ದಯ್ಯ, ಇದ್ದರು.





