ವಿರೇಂದರ್ ಕುಂದು ವರ್ಗಾವಣೆ ಬಿಜೆಪಿ ಷಡ್ಯಂತ್ರ: ಕಾಂಗ್ರೆಸ್ ಆರೋಪ

ಚಂಡಿಗಡ, ಸೆ.13: ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಟೂರಿಸಂ) ವಿರೇಂದರ್ ಕುಂದು ಅವರನ್ನು ಅದಕ್ಕಿಂತ ಕೆಳ ಹಂತದ ಇಲಾಖೆಯಾದ ಎಸಿಎಸ್ (ವಿಜ್ಞಾನ ಮತ್ತು ತಂತ್ರಜ್ಞಾನ) ಗೆ ವರ್ಗಾಯಿಸಲಾಗಿದೆ.
ವಿರೇಂದರ್ ಕುಂದು ಅವರ ಪುತ್ರಿ ವರ್ಣಿಕಾ ಕುಂದು ಅವ ರನ್ನುಇತ್ತೀಚೆಗೆ ಚಂಡಿಗಡದಲ್ಲಿ ಹರ್ಯಾಣದ ಬಿಜೆಪಿ ಮುಖ್ಯಸ್ಥ ತಮ್ಮ ಪುತ್ರ ಹಿಂಬಾಲಿಸಿದ ಪ್ರಕರಣಕ್ಕೆ ಸಂಬಂಧಿಸಿ ವಿರೇಂದರ್ ಪುತ್ರಿಯನ್ನು ಬೆಂಬಲಿಸಿದ ಹಿನ್ನೆಲೆಯಲ್ಲಿ ಈ ವರ್ಗಾವಣೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ಕುಂದು ವರ್ಗಾವಣೆ ಬಗ್ಗೆ ಪ್ರತಿಕ್ರಿಯಿಸಿರುವ ಹಿರಿಯ ಕಾಂಗ್ರೆಸ್ ನಾಯಕ ರಣ್‌ದೀಪ್ ಸಿಂಗ್ ಸುರ್ಜೇವಾಲ, ವಿರೇಂದರ್ ಕುಂದು ತನ್ನ ಪುತ್ರಿ ವರ್ಣಿಕಾ ಕುಂದುಗೆ ನ್ಯಾಯ ಕೇಳಿದ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಶಿಕ್ಷೆಗೊಳಗಾಗಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.
ಕುಂದು ಅವರನ್ನು ಹೊರತುಪಡಿಸಿ ಎಸಿಎಸ್ (ಗೃಹ) ರಾಮ್ ನಿವಾಸ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಅವರ ಸ್ಥಾನಕ್ಕೆ ಎಸಿಎಸ್ (ಆಹಾರ ಮತ್ತು ಪೂರೈಕೆ) ಶ್ಯಾಮ್ ಸುಂದರ್ ಅವರನ್ನು ನಿಯೋಜಿಸಲಾಗಿದೆ.
Next Story





