ಡೇರಾದ ಐಟಿ ಮುಖ್ಯಸ್ಥ ಬಂಧನ

ಸಿರ್ಸಾ, ಸೆ. 13: ಜೈಲು ಶಿಕ್ಷೆ ಅನುಭವಿಸುತ್ತಿರುವ ಗುರ್ಮೀತ್ ವಿರುದ್ಧದ ತನಿಖೆ ತೀವ್ರಗೊಂಡಿದ್ದು, ಹರ್ಯಾಣ ಪೊಲೀಸರು ಬುಧವಾರ ಪಂಥಕ್ಕೆ ಸೇರಿದ ಐಟಿ ಮುಖ್ಯಸ್ಥನನ್ನು ಸಿರ್ಸಾದಿಂದ ಬಂಧಿಸಿದ್ದಾರೆ.
ಬಂಧಿಸಲಾದ ಪಂಥದ ಐಟಿ ಮುಖ್ಯಸ್ಥನನ್ನು ವಿನೀತ್ ಎಂದು ಗುರುತಿಸಲಾಗಿದೆ. ಗುರ್ಮೀತ್ ಅಪರಾಧಿ ಎಂದು ಘೋಷಿಸಿ ಶಿಕ್ಷೆ ವಿಧಿಸಿದ ಬಳಿಕ ವಿನೀತ್ ನಾಪತ್ತೆಯಾಗಿದ್ದ.
ಈ ನಡುವೆ, ಪೊಲೀಸರು ಗುರ್ಮೀತ್‌ನ ದತ್ತುಪುತ್ರಿ ಹನಿಪ್ರೀತ್ ಕೌರ್ ಅವರ ಶೋಧ ಕಾರ್ಯ ಮುಂದುವರಿಸಿದ್ದಾರೆ. ಗುರ್ಮೀತ್ ಪಂಚಕುಲಾದ ನ್ಯಾಯಾಲಯದಿಂದ ಪರಾರಿಯಾಗುವ ಪ್ರಯತ್ನಕ್ಕೆ ಹನಿಪ್ರೀತ್ ಸಂಚು ರೂಪಿಸುವ ಮೂಲಕ ದೇಶದ್ರೋಹ ಎಸಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ
Next Story





