ರಾಜಕೀಯ ಲಾಭಕ್ಕಾಗಿ ಮಠವನ್ನು ದುರ್ಬಳಕೆ ಮಾಡಿಕೊಳ್ಳಬಾರದು: ಬಸವರಾಜ ಹೊರಟ್ಟಿ
ಬೆಂಗಳೂರು, ಸೆ.14: ತುಮಕೂರಿನ ಸಿದ್ದಗಂಗಾ ಶ್ರೀಗಳ ಬಗ್ಗೆ ಅಪಾರವಾದ ಗೌರವಿದೆ. ರಾಜಕಾರಣಿಗಳು ತಮ್ಮ ಲಾಭಕ್ಕಾಗಿ ಶ್ರೀಗಳನ್ನು ಈ ವಿವಾದದಲ್ಲಿ ಎಳೆದು ತರುವುದು ಸರಿಯಲ್ಲ. ಅವರ ಮನಸ್ಸಿಗೆ ನೋವುಂಟು ಮಾಡಬಾರದೆಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.
ನಗರದಲ್ಲಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಚುನಾವಣೆ ಲಾಭಕ್ಕಾಗಿ ನಾವು ಈ ಹೋರಾಟ ಆರಂಭಿಸಿಲ್ಲ. ಕೆಲವರು ತಮ್ಮ ರಾಜಕೀಯ ಲಾಭಕ್ಕಾಗಿ ಮಠವನ್ನು ಹಾಗೂ ಶ್ರೀಗಳನ್ನು ದುರ್ಬಳಕೆ ಮಾಡಿಕೊಳ್ಳಬಾರದು. ಶೀಘ್ರದಲ್ಲಿಯೇ ಎಲ್ಲರೂ ಶ್ರೀಗಳ ಆಶೀರ್ವಾದ ಪಡೆದು ಭಾಗಿಯಾಗುವ ಜೊತೆಗೆ ನಾಡಿನ ಎಲ್ಲ ಮಠಾಧೀಶರ ಬೆಂಬಲ ಪಡೆದೇ ಹೋರಾಟ ನಡೆಸಲಾಗುವುದೆಂದು ನುಡಿದರು.
Next Story





