Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಸಿನಿಮಾ
  4. ಈ ವಾರ 'ಭರ್ಜರಿ' ಬಿಡುಗಡೆ

ಈ ವಾರ 'ಭರ್ಜರಿ' ಬಿಡುಗಡೆ

ಶಶಿಕರ ಪಾತೂರುಶಶಿಕರ ಪಾತೂರು14 Sept 2017 7:27 PM IST
share
ಈ ವಾರ ಭರ್ಜರಿ ಬಿಡುಗಡೆ

"ಚಿತ್ರದ ಹಾಡುಗಳ ಸಿಡಿಯನ್ನು ಬಿಡುಗಡೆಯೇ ಮಾಡಿಲ್ಲ. ಬದಲಿಗೆ ವಿಡಿಯೋ ಮತ್ತು ಆಡಿಯೋ ಎರಡೂ ಜೊತೆಯಾಗಿರುವ ಹಾಡುಗಳನ್ನು ಯೂಟ್ಯೂಬ್ ಗೆ ಹಾಕಲಾಯಿತು. ಆರೇ ದಿನಗಳಲ್ಲಿ 20 ಲಕ್ಷ ವ್ಯೂವ್ ಪಡೆದಿರುವುದು 'ಭರ್ಜರಿ' ಚಿತ್ರದ ಮೇಲೆ ಜನ ಎಷ್ಟು ಇಷ್ಟ ಪಟ್ಟಿದ್ದಾರೆ ಎನ್ನುವುದನ್ನು ‌ಸೂಚಿಸುತ್ತದೆ" ಎಂದರು ನಿರ್ದೇಶಕ ಚೇತನ್ ಕುಮಾರ್. ಅವರು ಭರ್ಜರಿ ಚಿತ್ರದ ಬಿಡುಗಡೆಯ ಪೂರ್ವಭಾವಿಯಾಗಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.

ಸಬ್ಜೆಕ್ಟ್ ಮೇಲಿನ ನಂಬಿಕೆಯಿಂದಲೇ ಅದ್ದೂರಿ ತಾರಾಗಣದ ಬಳಕೆಗೆ ನಿರ್ಮಾಪಕರು ಒಪ್ಪಿದ್ದಾರೆ. ದ್ರುವ ಮತ್ತು ಮೂವರು ನಾಯಕಿಯರಷ್ಟೇ ಅಲ್ಲದೆ, ಶ್ರೀನಿವಾಸ ಮೂರ್ತಿ, ರಂಗಾಯಣ ರಘು, ತಾರಾ ಅನುರಾಧ ಸೇರಿದಂತೆ ಹಿರಿಯ ಕಲಾವಿದರ ದಂಡೇ ಚಿತ್ರದಲ್ಲಿದೆ. ದ್ರುವ ಅವರ
'ಅದ್ಧೂರಿ', 'ಬಹದ್ದೂರು' ಚಿತ್ರಗಳು ಫೈಟ್ ಮತ್ತು ಹಾಡುಗಳಿಂದಾಗಿ ಮೆಚ್ಚುಗೆ ಪಡೆದಿತ್ತು . ಭರ್ಜರಿಯಲ್ಲಿ ಇನ್ನಷ್ಟು ಅಂಶಗಳನ್ನು ಸೇರಿಸಿ ಭಯ, ಶ್ರದ್ಧೆಯಿಂದ ಚಿತ್ರ ಮಾಡಿದ್ದೇನೆ. ಖಂಡಿತವಾಗಿ ಎಲ್ಲರೂ ಒಟ್ಟಿಗೇ ಕುಳಿತು ನೋಡುವಂಥ ಸಿನಿಮಾ ಇದಾಗಿರುತ್ತದೆ.

ತೆಲುಗು ಸಿನಿಮಾಗಳಲ್ಲಿ ಕಾಣುವಂತಹ ಅದ್ಧೂರಿ ಸೆಟ್ ಚಿತ್ರದಲ್ಲಿರುತ್ತದೆ ಎಂದರು ನಿರ್ದೇಶಕ ಚೇತನ್ ಕುಮಾರ್. ನಿರ್ಮಾಪಕ ಕನಕಪುರ
ಶ್ರೀನಿವಾಸ್ ಮಾತನಾಡಿ, "ಚೇತನ್ ಮತ್ತು ದ್ರುವ ಮೇಲಿನ ನಂಬಿಕೆಯಿಂದಲೇ ದೊಡ್ಡ ಮೊತ್ತದ ಚಿತ್ರ ಮಾಡಿದ್ದೇನೆ. ಬೇರೆ ಆಫರ್ ಗಳು ಬಂದರೂ ನಾಯಕ, ನಿರ್ದೇಶಕರು ಒಪ್ಪಿಲ್ಲ. ಅದು ಅವರ ಸಮರ್ಪಣಾ ಭಾವವನ್ನು ಸೂಚಿಸುತ್ತದೆ'' ಎಂದರು. ಇದೇ ಸಂದರ್ಭದಲ್ಲಿ ಅವರು ಚಿತ್ರದ ವಿತರಕ ಬಾಷಾ ಅವರು ನೀಡಿದ ಸಹಕಾರ ಮರೆಯಲಾಗದು ಎಂದರು. ಕ್ಲೈಮ್ಯಾಕ್ಸ್ ಸಾಂಗ್ ಅಂತೂ  ಸೂಪರ್ ಆಗಿ ಮೂಡಿ‌ಬಂದಿದೆ, ಎಲ್ಲರಿಗೂ ಇಷ್ಟವಾಗುತ್ತದೆ ಎನ್ನುವುದು ಕನಕಪುರ ಶ್ರೀನಿವಾಸರ ಮಾತಾಗಿತ್ತು. ಬಳಿಕ ಮಾತನಾಡಿದ  ಬಾಷಾ, ಚಿತ್ರವು 300 ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದರು.

ನಾಯಕಿ ರಚಿತಾ ರಾಮ್ ಚಿತ್ರದ ಕತೆಯು ಡಿಂಪಲ್ ಮೇಲೆಯೇ ಸಾಗುತ್ತದೆ ಅಂದಾಗ ಖುಷಿಯಾಯಿತು. ಡಿಂಪಲ್ ಕುರಿತಾದ ಹಾಡು ಕೂಡ ಇದೆ ಎಂದು ಸಂಭ್ರಮ ಪಟ್ಟರು. ಚಿತ್ರದ ಕೀ ರೋಲ್ ಮಾಡೋರು ತುಂಬಾ ಮುಖ್ಯವಾಗಿರುತ್ತಾರೆ. ಅಂಥ ಪಾತ್ರವನ್ನು ಹರಿಪ್ರಿಯ ಮಾಡಿದ್ದಾರೆ. ಕಾಡುವಂಥ ಪಾತ್ರ ಎಂದು ಚೇತನ್ ಹೇಳಿದಾಗ ಪ್ರತಿಕ್ರಿಯಿಸಿದ ಹರಿಪ್ರಿಯ, "ಯೋಗರಾಜ್ ಭಟ್ ಮತ್ತು 'ಕಳ್ಳರ ಸಂತೆ' ಚಿತ್ರದ ನಿರ್ಮಾಪಕರು ಈ ಪಾತ್ರ ಮಾಡುವಂತೆ ಸೂಚಿಸಿದರು.‌ ನನ್ನದು ಹಾಸಿನಿ ಎಂಬ ರೆಸ್ಪಾನ್ಸಿಬಲ್ ಆಗಿರುವ ನಾರ್ತ್ ಕರ್ನಾಟಕದ ಹುಡುಗಿಯ ಪಾತ್ರ. ‌ಬಾದಾಮಿ ಕಡೆ ಚಿತ್ರೀಕರಿಸಲಾಗಿದೆ.

ಚಿತ್ರೀಕರಣದ ವೇಳೆ ಪುಟಗಟ್ಟಲೆ ಸಂಭಾಷಣೆ ಹೇಳುತ್ತಿದ್ದ ನಾಯಕ ದ್ರುವ ಅವರ ನೆನಪು ಶಕ್ತಿ ನೋಡಿ ಅಚ್ಚರಿಯಾಯಿತು" ಎಂದರು. ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ವೈಶಾಲಿ ದೀಪಕ್, ನನ್ನದು ಚಿಟ್ಟೆಯಂಥ ಪಾತ್ರ. ಚಾರ್ಲಿ ಚಿತ್ರ ನೋಡಿ ಇಷ್ಟಪಟ್ಟು ಈ ಪಾತ್ರ ನೀಡಿದ್ದಾರೆ. ಕತೆ ಕೇಳಿದಾಗ  ತುಂಬ ಇಷ್ಟವಾಗಿತ್ತು. ಆರ್ಟ್ ಡಿಪಾರ್ಟ್ಮೆಂಟ್ ಅದ್ಭುತ ಕೆಲಸ ಮಾಡಿದೆ‌ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಚಿತ್ರಕ್ಕೆ ವಾಯ್ಸ್ ಓವರ್ ನೀಡಿರುವ ನಾಯಕ ದರ್ಶನ್ ಮತ್ತು ವಿಶೇಷ ಪಾತ್ರಗಳಲ್ಲಿ ಕಾಣಿಸಿರುವ ಅನಿಲ್ , ಉದಯ್, ಪೆಟ್ರೋಲ್ ಪ್ರಸನ್ನ, ಅವಿನಾಶ್ ಮೊದಲಾದವರನ್ನು ಕೃತಜ್ಞತಾ ಪೂರ್ವಕವಾಗಿ ನೆನಪಿಸಿಕೊಂಡರು ನಾಯಕ ದ್ರುವ ಸರ್ಜ. ಯುವ ನಟ ದೀಪಕ್ ತಮ್ಮದು ರಫ್ ಅ್ಯಂಡ್ ಟಫ್ ಕ್ಯಾರೆಕ್ಟರ್ ಅಂದರು. ಮತ್ತೋರ್ವ ನಟ ರಾಮು ಮಾತನಾಡಿ, ಖಳನಾಗಿ ನಟಿಸುವುದಾದರೆ ಅದು ಚೇತನ್ ಚಿತ್ರದಲ್ಲಿ ಯೇ ಆಗಬೇಕು. ಆ ರೀತಿ ತೋರಿಸಿದ್ದಾರೆ ಎಂದರು.

ಚಿತ್ರಕ್ಕೆ ಹರಿಕೃಷ್ಣ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಾಹಕ ಶ್ರೀಶ ಕುದುವಳ್ಳಿಗೆ ಇದು ಆರನೇ ಸಿನಿಮಾವಂತೆ. ಇದುವರೆಗಿನ ತಮ್ಮ ಚಿತ್ರಗಳಲ್ಲಿ ಇದೇ ದೊಡ್ಡ ಚಿತ್ರ ಎನ್ನುವುದು ಅವರ ಅನಿಸಿಕೆ.

share
ಶಶಿಕರ ಪಾತೂರು
ಶಶಿಕರ ಪಾತೂರು
Next Story
X