ಕಾಡಾನೆ ದಾಳಿ: ಅಡಿಕೆ ಗಿಡ ನಾಶ
ಚಿಕ್ಕಮಗಳೂರು, ಸೆ.14: ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಚಿಕ್ಕ ಅಗ್ರಹಾರ ಗ್ರಾಮದಲ್ಲಿ ಕಾಡಾನೆಗಳ ಹಿಂಡು ಅಡಿಕೆ ತೋಟಕ್ಕೆ ನುಗ್ಗಿ ದಾಂದಲೆ ನಡೆಸಿದೆಯಲ್ಲದೆ, ನೂರಾರು ಅಡಿಕೆ ಗಿಡಗಳನ್ನು ಮುರಿದು ಅಪಾರ ಪ್ರಮಾಣದ ಬೆಳೆ ನಾಶಪಡಿಸಿದೆ.
ಚಿಕ್ಕ ಅಗ್ರಹಾರ ಗ್ರಾಮದ ಸುಬ್ಬೇಗೌಡ ಎಂಬವರಿಗೆ ಸೇರಿದ ಅಡಿಕೆ ತೋಟದೊಳಗೆ ನುಗ್ಗಿರುವ ಕಾಡಾನೆ ಅನೇಕ ಅಡಿಕೆ ಗಿಡಗಳನ್ನು ಮುರಿದು ನಷ್ಟವನ್ನು ಉಂಟು ಮಾಡಿದೆ. ಸುಮಾರು 20 ವರ್ಷಗಳ ಹಳೆಯ ಅಡಿಕೆ ಮರಗಳು ಐವತ್ತು ಸಾವಿರಕ್ಕೂ ಅಧಿಕ ಬೆಲೆ ಬಾಳುವ ಅಡಿಕೆ ಗಿಡಗಳನ್ನು ತುಳಿದು ನಷ್ಟವನ್ನುಂಟು ಮಾಡಿದೆ ಎಂದು ಸುಬ್ಬೇಗೌಡ ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನಿಡಿ ಪರಿಶೀಲನೆ ನಡೆಸಿದ್ದಾರೆ.
Next Story





