‘ಸಿಟ್’ ಜೊತೆಯಲ್ಲಿ ವಿದೇಶಿ ಪೊಲೀಸ್ ದಳ
ಗೌರಿ ಲಂಕೇಶ್ ಹತ್ಯೆ ಪ್ರಕರಣ
.jpg)
ಬೆಂಗಳೂರು, ಸೆ.14: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ ತನಿಖೆ ಇನ್ನಷ್ಟು ಚುರುಕುಗೊಳಿಸಲು ಸಿಟ್ ತನಿಖಾಧಿಕಾರಿಗಳೊಂದಿಗೆ ವಿದೇಶಿ ಪೊಲೀಸ್ ದಳದ ಅಧಿಕಾರಿಗಳು ಕಾರ್ಯ ನಿರ್ವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳಕ್ಕೆ(ಸಿಟ್) ನೆರವು ನೀಡಲು ಹೊರ ರಾಷ್ಟ್ರದ ಪೊಲೀಸ್ ದಳದ ಇಬ್ಬರು ಅಧಿಕಾರಿಗಳು ಗುರುವಾರ ಬೆಂಗಳೂರಿಗೆ ಬಂದಿದ್ದಾರೆ. ಅಲ್ಲದೆ, ಪ್ರಕರಣ ಸಂಬಂಧ ನೆರವು ನೀಡುವಂತೆ ಸಿಟ್ ಮುಖ್ಯಸ್ಥರು ಮನವಿ ಮಾಡಿದ್ದ ಹಿನ್ನೆಲೆಯಲ್ಲಿ ಹೊರ ರಾಷ್ಟ್ರದ ಪೊಲೀಸ್ ದಳದ ಅಪರಾಧ ವಿಭಾಗದ ಹಿರಿಯ ಅಧಿಕಾರಿಗಳಿಬ್ಬರು ಬಂದಿರುವುದಾಗಿ ಉನ್ನತ ಮೂಲಗಳು ತಿಳಿಸಿವೆ.
ಗೌರಿ ಲಂಕೇಶ್ ಅವರ ಸ್ವಗೃಹ, ಕಚೇರಿ ಸೇರಿದಂತೆ ನಗರದ ನಾನಾ ಭಾಗಗಳಿಗೆ ಭೇಟಿ ನೀಡಲಿರುವ ಈ ಇಬ್ಬರು ವಿದೇಶಿ ಅಧಿಕಾರಿಗಳು, ಆಧುನಿಕ ತಂತ್ರಜ್ಞಾನದಿಂದ ಆರೋಪಿಗಳ ಪತ್ತೆ ಹಚ್ಚಲು ಮುಂದಾಗಲಿದ್ದಾರೆ. ಅಲ್ಲದೆ, ಪ್ರಕರಣ ಸಂಬಂಧ ಇದುವರೆಗೂ ನಡೆದ ತನಿಖೆ ಬಗ್ಗೆ ವಿದೇಶಿ ಅಧಿಕಾರಿಗಳಿಗೆ ಸಿಟ್ ತನಿಖಾಧಿಕಾರಿಗಳು ಮಾಹಿತಿ ನೀಡಿರುವುದಾಗಿ ತಿಳಿದು ಬಂದಿದೆ.
ಅಪರಾಧಿಗಳ ವಿಚಾರಣೆ: ಕಾನೂನು ಬಾಹಿರವಾಗಿ ಪಿಸ್ತೂಲು ಇಟ್ಟುಕೊಂಡಿದ್ದ ಹಾಗೂ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಪೊಲೀಸರಿಗೆ ಸಿಕ್ಕಿ ಜೈಲು ಸೇರಿರುವ ಅಪರಾಧಿಗಳನ್ನು ಸಿಟ್ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಗುರುವಾರ ವಿಜಯಪುರ ಕಾರಾಗೃಹ ಸೇರಿ ಇನ್ನಿತರ ಕಡೆ ಅಪರಾಧಿಗಳನ್ನು ವಿಚಾರಣೆಗೊಳಪಡಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಕಾನೂನು ಬಾಹಿರವಾಗಿ ಪಿಸ್ತೂಲು ಇಟ್ಟುಕೊಂಡಿದ್ದ ಹಾಗೂ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಪೊಲೀಸರಿಗೆ ಸಿಕ್ಕಿ ಜೈಲು ಸೇರಿರುವ ಅಪರಾಧಿಗಳನ್ನು ಸಿಟ್ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಗುರುವಾರ ವಿಜಯಪುರ ಕಾರಾಗೃಹ ಸೇರಿ ಇನ್ನಿತರ ಕಡೆ ಅಪರಾಧಿಗಳನ್ನು ವಿಚಾರಣೆಗೊಳಪಡಿಸಲಾಗಿದೆ ಎಂದು ಹೇಳಲಾಗುತ್ತಿದೆ.
30ಕ್ಕೂ ಹೆಚ್ಚು ಮಂದಿ ಹೇಳಿಕೆ ಸಂಗ್ರಹ: ಗೌರಿ ಲಂಕೇಶ್‌ರ ಸ್ವಗೃಹ ರಾಜರಾಜೇಶ್ವರಿ ನಗರ ಸೇರಿದಂತೆ ಹಲವು ಕಡೆ 30ಕ್ಕೂ ಹೆಚ್ಚು ನಿವಾಸಿಗಳ ಮೇಲೆ ಅನುಮಾನ ವ್ಯಕ್ತಪಡಿಸಿರುವ ಸಿಟ್ ಅಧಿಕಾರಿಗಳು, ಅವರಿಂದ ಹೇಳಿಕೆ ಪಡೆಯುತ್ತಿದ್ದಾರೆ. ಅದೇ ರೀತಿ, ಟವರ್ ಮೂಲಕ ಸಂಪರ್ಕವಾದ 10 ಲಕ್ಷಕ್ಕೂ ಹೆಚ್ಚು ಕರೆಗಳ ವಿವರಗಳನ್ನು ಸಂಗ್ರಹಿಸಿದ್ದಾರೆ ಎನ್ನಲಾಗಿದೆ.
ರೌಡಿ, ಸಹಚರರ ವಿಚಾರಣೆ:
ರಾಮನಗರ ಜೈಲಿನಲ್ಲಿರುವ ರೌಡಿ ಕುಣಿಗಲ್ ಗಿರಿ ಹಾಗೂ ಆತನ ಆರು ಸಹಚರರನ್ನು ಪೊಲೀಸರು ಗುರುವಾರ ವಿಚಾರಣೆಗೊಳಪಡಿಸಿದರು. ಅಪಹರಣ, ಸುಲಿಗೆ, ದರೋಡೆ ಸೇರಿದಂತೆ 51 ಪ್ರಕರಣಗಳ ಆರೋಪಿಯಾದ ಗಿರಿಯನ್ನು ಪೊಲೀಸರು, ಮೂರು ವರ್ಷಗಳ ಹಿಂದೆ ಆಂಧ್ರ ಪ್ರದೇಶದಲ್ಲಿ ಬಂಧಿಸಿದ್ದರು. ಬಳಿಕ ಆತ ರಾಮನಗರದ ಜೈಲಿನಲ್ಲಿದ್ದ ಎನ್ನಲಾಗಿದೆ.ಅಪರಾಧ ಚಟುವಟಿಕೆಗಳಿಂದ ನನ್ನ ಹೆಸರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೇಳಿ ಬರಬೇಕು. ರಾಷ್ಟ್ರಪತಿ, ಪ್ರಧಾನಿ ನನ್ನ ಬಗ್ಗೆ ಮಾತನಾಡುವಂತಾಗಬೇಕು ಎಂದು ಗಿರಿ ಹೇಳುತ್ತಿದ್ದ. ಕೆಲ ಸುಪಾರಿ ಹತ್ಯೆಯಲ್ಲೂ ಭಾಗಿಯಾಗಿದ್ದ. ಹೀಗಾಗಿ, ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಆತನ ಪಾತ್ರವಿದೆಯಾ ಎಂಬುದನ್ನು ತಿಳಿದುಕೊಳ್ಳಲು ವಿಚಾರಣೆಗೊಳಪಡಿಸಲಾಗಿದೆ.







