ಮಹಿಳೆಯ ಕುತ್ತಿಗೆಯಿಂದ ಸರ ಕಿತ್ತು ಪರಾರಿ
ಮಂಗಳೂರು, ಸೆ. 14: ನಗರದ ಪದವಿನಂಗಡಿ ಬೊಲ್ಪುಗುಡ್ಡೆಯಲ್ಲಿ ಗುರುವಾರ ಮಧ್ಯಾಹ್ನ ಬೈಕ್‌ನಲ್ಲಿ ಬಂದ ವ್ಯಕ್ತಿಯೋರ್ವ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬರ ಕುತ್ತಿಗೆಗೆ ಕೈ ಹಾಕಿ ಚಿನ್ನ ಹಾಗೂ ಹವಳದ ಸರವನ್ನು ಕಿತ್ತು ಪರಾರಿಯಾಗಿರುವ ಘಟನೆ ನಡೆದಿದೆ.
ಶಕ್ತಿನಗರ ನಿವಾಸಿ ವಿನಿತಾ ಕಿಣಿ ಎಂಬವರು 8 ಪವನ್ ಚಿನ್ನ ಹಾಗೂ ಹವಳದ ಸರವನ್ನು ಕಳೆದುಕೊಂಡಿದ್ದಾರೆ. ವಿನಿತಾ ಅವರು ತಾಯಿ ಮನೆಗೆ ಹೋಗುತ್ತಿದ್ದಾಗ ಬೊಲ್ಪುಗುಡ್ಡೆಯಲ್ಲಿ ಎದುರಿನಿಂದ ಬೈಕ್‌ನಲ್ಲಿ ಬಂದ ಆರೋಪಿ ಈ ಕೃತ್ಯ ಎಸಗಿದ್ದಾನೆ.
ಕಾವೂರು ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
Next Story





