14 ಸಜೀವ ಬಾಂಬ್ ಗಳು ಪತ್ತೆ

ಹೌರಾಹ್, ಸೆ. 14: ನಿನ್ನೆ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಓರ್ವ ಗಾಯಗೊಂಡ ಹೌರಾಹ್ ಜಿಲ್ಲೆಯ ಅಂಗಡಿಯೊಂದರಿಂದ 14 ಸಜೀವ ಬಾಂಬ್‌ಗಳನ್ನು ಪತ್ತೆ ಹಚ್ಚಲಾಗಿದೆ.
ಬಾಂಬ್ ನಿಷ್ಕ್ರಿಯ ದಳ ಇಂದು ಬೆಳಗ್ಗೆ ಅಂಗಡಿಯಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿರುವಾಗ ಈ ಬಾಂಬ್‌ಗಳು ಪತ್ತೆಯಾದವು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಿನ್ನೆ ಸಂಭವಿಸಿದ ಸ್ಫೋಟದಿಂದ ಅಂಗಡಿ ಮಾಲಕ ಕೋಮರ್ ಅಲಿ ಗಂಭೀರ ಗಾಯಗೊಂಡಿದ್ದರು. ಅವರನ್ನು ಉಲುಬೇರಿಯಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಹೇಳಿರುವ ಅವರು, ಅಲಿ ಅವರು ಆಸ್ಪತ್ರೆಯಲ್ಲಿ ಇರುವುದರಿಂದ ಅವರನ್ನು ಇದುವರೆಗೆ ವಿಚಾರಣೆ ನಡೆಸಿಲ್ಲ ಎಂದಿದ್ದಾರೆ.
ಮಾಣಿಕ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯ ತೀನ್ ಕಾಪಟಿ ಪೂಲ್‌ನಲ್ಲಿರುವ ಅಂಗಡಿಯನ್ನು ನಿನ್ನೆ ಸಂಜೆ ಮಾಲಕ ಮುಚ್ಚುವ ಸಂದರ್ಭ ಬಾಂಬ್ ಸ್ಫೋಟಗೊಂಡಿತು ಎಂದು ಪೊಲೀಸರು ತಿಳಿಸಿದ್ದಾರೆ.
Next Story





