ಬುಲೆಟ್ ಟ್ರೈನ್‌ಗೆ ಶಿಲಾನ್ಯಾಸ...
ಅಹ್ಮದಾಬಾದ್- ಮುಂಬೈ ಮಧ್ಯೆ ಸಂಚರಿಸುವ ಭಾರತದ ಪ್ರಪ್ರಥಮ ಬುಲೆಟ್ ರೈಲು ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಜಪಾನ್ ಪ್ರಧಾನಿ ಶಿಂರೊ ಅಬೆ ಶಿಲಾನ್ಯಾಸ ನೆರವೇರಿಸಿದರು. 508 ಕಿ.ಮೀ. ಉದ್ದದ ಅಹ್ಮದಾಬಾದ್- ಮುಂಬೈ ಹೈಸ್ಪೀಡ್ ರೈಲು ಯೋಜನೆ 1.10 ಲಕ್ಷ ಕೋಟಿ ರೂ. ವೆಚ್ಚದ್ದಾಗಿದ್ದು ಯೋಜನೆಗೆ 88,000 ಕೋಟಿ ರೂ. ಸಾಲವನ್ನು ಜಪಾನ್ ನೀಡಿದೆ. ಈ ಸಾಲಕ್ಕೆ 0.01 ಶೇಕಡಾ ಬಡ್ಡಿದರವಿದ್ದು 50 ವರ್ಷ ಮರುಪಾವತಿ ಅವಧಿಯಿದೆ. ಅಲ್ಲದೆ 15 ವರ್ಷದ ಬಳಿಕ ಮರುಪಾವತಿ ಅವಧಿ ಆರಂಭವಾಗುತ್ತದೆ. 2017ರ ಸೆ.14ರಂದು ಯೋಜನೆಯ ಕಾಮಗಾರಿ ಆರಂಭಗೊಳ್ಳಲಿದ್ದು 2022ರಲ್ಲಿ ಈ ಯೋಜನೆ ಪೂರ್ಣಗೊಳ್ಳಲಿದೆ.
Next Story





