ಸೆ.24 ರಂದು ವಿಶ್ವಕರ್ಮ ಜಯಂತಿ
ಬೆಂಗಳೂರು, ಸೆ. 15: ವಿಶ್ವಕರ್ಮ ಸಮುದಾಯ ಸಂಘದ ವತಿಯಿಂದ 4 ನೆ ವರ್ಷದ ವಿಶ್ವಕರ್ಮ ಜಯಂತ್ಯುತ್ಸವವನ್ನು ಸೆ.24 ರಂದು ಬನ್ನೇರುಘಟ್ಟ ರಸ್ತೆಯಲ್ಲಿರುವ ಅಪ್ಪಿ ಜೆ.ಜೆ.ಆಟದ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಬೆಂಗಳೂರು ದಕ್ಷಿಣ ವಿಭಾಗ ಅಧ್ಯಕ್ಷ ಎನ್.ಎಸ್.ರಾಜು, ಕಾರ್ಯಕ್ರಮವನ್ನು ಶಾಸಕ ಸತೀಶ್‌ರೆಡ್ಡಿ ಉದ್ಘಾಟಿಸಲಿದ್ದು, ಮಾಜಿ ವಿಧಾನಪರಿಷತ್ತು ಸದಸ್ಯ ದಯಾನಂದರೆಡ್ಡಿ, ಸಂಘದ ರಾಜ್ಯಾಧ್ಯಕ್ಷ ಕೆ.ಪಿ.ನಂಜುಂಡಿ, ಪಾಲಿಕೆ ಸದಸ್ಯ ಪುರುಷೋತ್ತಮ್ ಸೇರಿದಂತೆ ಹಲವರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
Next Story





