ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗ್ರಾಪಂ ನೌಕರರ ಧರಣಿ

ಚಿಕ್ಕಮಗಳೂರು, ಸೆ.15: ಗ್ರಾಪಂ ನೌಕರರು ಎದುರಿಸುತ್ತಿರುವ ಹಲವು ಸಮಸ್ಯೆಗಳನ್ನು ತಕ್ಷಣ ಬಗೆಹರಿಸಿಕೊಡುವಂತೆ ಆಗ್ ರಾಜ್ಯ ಗ್ರಾಪಂ ನೌಕರರ ಪೆಡರೇಶನ್ ಮತ್ತು ಎಐಟಿಯುಸಿ ನೇತೃತ್ವದಲ್ಲಿ ಶುಕ್ರವಾರ ನಗರದಲ್ಲಿ ಧರಣಿ ನಡೆಸಿ ಜಿಪಂ ಸಿಇಒಗೆ ಮನವಿ ಸಲ್ಲಿಸಿದರು.
ಈ ವೇಲೆ ಧರಣಿನಿರತರರು ಮಾತನಾಡಿ, ಗ್ರಾಪಂ ನೌಕರರಿಗೆ ಸಂಘಟನೆ ಹೋರಾಟದ ಫಲವಾಗಿ ಸರ್ಕಾರ ಹಲವು ಆದೇಶಗಳನ್ನು ಹೊರಡಿಸಿದೆ. ಆದರೆ ಜಿಲ್ಲೆಯ ಗ್ರಾಪಂ ಹಾಗೂ ಸಂಬಂಧಿಸಿದ ಅಧಿಕಾರಿಗಳು ಈ ಆದೇಶಗಳನ್ನು ಜಾರಿಗೆ ತರುವಲ್ಲಿ ವಿಫಲವಾಗಿದ್ದಾರೆ. ಸರ್ಕಾರದ ಆದೇಶ ಮತ್ತು ನೌಕರರ ಹಿತರಕ್ಷಣೆಯನ್ನು ಕಡೆಗಣಿಸಲಾಗಿದೆ. ಈಗಾಗಲೇ ನಿವೃತ್ತಿಗೊಂಡ ನೌಕರರಿಗೆ ನಿವೃತ್ತಿ ಉಪದಾನ ನೀಡಬೇಕು. ವರ್ಷಕ್ಕೆ 15 ಗಂಟೆ ಉಳಿಕೆ ರಜೆ ನೀಡಬೇಕು. ನೌಕರರಿಗೆ ಸಮವಸ್ತ್ರ, ಭಡ್ತಿ, ಇನ್ನೂ ಹಲವು ಆದೇಶಗಳು, ಸುತ್ತೋಲೆಗಳ ಜಾರಿಯಾಗಿಲ್ಲ ಎಂದು ದೂರಿದರು.
ಸರ್ಕಾರ ಕೋರಿರುವ ನೌಕರರ ಅನುಮೋದನೆ ವಿವರವನ್ನು ಎಲ್ಲಾ ಪಂಚಾಯತ್‍ಗಳಲ್ಲಿ ತುರ್ತಾಗಿ ಅಳವಡಿಸಬೇಕು. ಸರ್ಕರಿ ಸುತ್ತೋಲೆಯಂತೆ ನೌಕರರ ಅನುಮೋಧನೆಯನ್ನು ತುರ್ತು ಕ್ರಮವಹಿಸಬೇಕು. ಬಾಕಿ ನಿಂತಿರುವ ವೇತನವನ್ನು ನಿಡಬೇಕು. ಅನುಮೋಧನೆ ನೆಪ ಹೇಳದೆ ಸುತ್ತೋಲೆಯಂತೆ ಎಲ್ಲಾ ನೌಕರರಿಗೆ ಕನಿಷ್ಠ ವೇತನ ನೀಡಬೇಕು. ನಿವೃತ್ತಿಗೊಂಡಿರುವ ನೌಕರರಿಗೆ ನಿವೃತ್ತಿ ಉಪದಾನ ಕೂಡಲೇ ಪಾವತಿಸುವಂತೆ ಸೂಚಿಸಬೇಕೆಂದು ಒತ್ತಾಯಿಸಿದರು.
ಗ್ರಾಪಂಗಳಲ್ಲಿ ಕಂದಾಯ ಪರಿಷ್ಕರಣೆಯನ್ನು ಮಾಡಿ ಆದಾಯ ಹೆಚ್ಚಿಸಿಕೊಳ್ಳುವಂತೆ ಸೂಚಿಸಬೇಕು. ಸುತ್ತೋಲೆಯಂತೆ ಅರ್ಹ ನೌಕರರಿಗೆ ಕಡ್ಡಾಯವಾಗಿ ಭಡ್ತಿ ನೀಡಬೇಕು. ಸರ್ಕಾರಿ ಸುತ್ತೋಲೆಗಳನ್ನು ಜಾರಿಗೊಳಿಸದ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಈ ಸಂರ್ಭದಲ್ಲಿ ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಎಸ್.ವಿಜಯಕುಮಾರ್, ಗ್ರಾಮ ಪಂಚಾಯತ್ ನೌಕರರ ಪೆಡರೇಷನ್ ಅಧ್ಯಕ್ಷ ಎಚ್.ಕೆ.ರಾಮಚಂದ್ರಪ್ಪ, ಗ್ರಾಪಂ ನೌಕರರ ಸಂಘದ ಕಾರ್ಯದರ್ಶಿ ವೈ.ಎಂ.ಉಮೇಶ್ ಮತ್ತಿತರರಿದ್ದರು.







