ಬೆಳ್ಮರೆಂಜಾಡಿ: ಟೈಲರಿಂಗ್ ತರಬೇತಿ ಶಿಬಿರ ಉದ್ಘಾಟನೆ

ಉಳ್ಳಾಲ, ಸೆ.15: ಮಹಿಳೆಯರ ಸಬಲೀಕರಣಕ್ಕಾಗಿ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಪ್ರತಿ ಗ್ರಾಮಗಳಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದು, ಮಹಿಳೆಯರು ಇದರ ಸದುಪಯೋಗ ಪಡೆದು ಸ್ವಉದ್ಯೋಗದ ಮೂಲಕ ಜೀವನ ರೂಪಿಸಿಕೊಳ್ಳಬೇಕು ಎಂದು ಜಿಪಂ ಸದಸ್ಯೆ ರಶೀದಾ ಬಾನು ಹೇಳಿದರು.
ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ವತಿಯಿಂದ ಬೆಳ್ಮ ರೆಂಜಾಡಿಯ ಮದ್ರಸದಲ್ಲಿ ಏರ್ಪಡಿಸಲಾದ ಟೈಲರಿಂಗ್ ತರಬೇತಿ ಶಿಬಿರ (ವಿನ್ಯಾಸ ಟೈಲರಿಂಗ್ ಸೆಂಟರ್)ದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಬೆಳ್ಮ ಗ್ರಾಪಂ ಅಧ್ಯಕ್ಷೆ ವಿಜಯಾ ಕೃಷ್ಣ ಪೂಜಾರಿ ಶಿಬಿರ ಉದ್ಘಾಟಿಸಿದರು. ಬೆಳ್ಮ ಗ್ರಾಪಂ ಸದಸ್ಯೆ ಶರ್ಮಿಳಾ, ಆಸರೆ ವುಮೆನ್ಸ್ ಫೌಂಡೇಶನ್ ಸ್ಥಾಪಕ ಅಧ್ಯಕ್ಷೆ ಶಬೀನಾ ಅಖ್ತಾರ್, ಬೆಳ್ಮ ಗ್ರಾಪಂ ಸದಸ್ಯೆಯರಾದ ರಝಿಯಾ, ಸುಹೈಲಾ ಉಸ್ಮಾನ್, ಮರಿಯಮ್, ಟೈಲರಿಂಗ್ ಶಿಕ್ಷಕಿ ಆಯಿಶಾ, ಸಹನಾ ವುಮೆನ್ಸ್ ಕೌನ್ಸಿಲಿಂಗ್‌ನ ಖೈರುನ್ನೀಸಾ ಸೆಯ್ಯದ್, ಸದಸ್ಯೆ ರೆಷ್ಮಾ ಉಪಸ್ಥಿತರಿದ್ದರು. ಮುಮ್ತಾಝ್ ಸ್ವಾಗತಿಸಿ, ವಂದಿಸಿದರು. ಅತಿಕಾ ರಫೀಕ್ ಕಾರ್ಯಕ್ರಮ ನಿರೂಪಿಸಿದರು.





