ಪಾಕಿಸ್ತಾನಿ ರೇಂಜರ್‌ಗಳಿಂದ ಬಿಎಸ್‌ಎಫ್ ಯೋಧನ ಹತ್ಯೆ

ಶ್ರೀನಗರ,ಸೆ.15: ಜಮ್ಮು ಜಿಲ್ಲೆಯಲ್ಲಿ ಅಂತರರಾಷ್ಟ್ರೀಯ ಗಡಿಯ ಅರ್ನಿಯಾ ಉಪವಿಭಾಗದಲ್ಲಿ ಶುಕ್ರವಾರ ಬೆಳಿಗ್ಗೆ ಪಾಕಿಸ್ತಾನಿ ರೇಂಜರ್‌ಗಳು ಕದನ ವಿರಾಮವನ್ನು ಉಲ್ಲಂಘಿಸಿ ಭಾರತೀಯ ನೆಲೆಗಳ ಮೇಲೆ ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದು, ಓರ್ವ ಬಿಎಸ್‌ಎಫ್ ಯೋಧ ಕೊಲ್ಲಲ್ಪಟ್ಟಿದ್ದಾನೆ.
ಪಾಕಿಗಳ ದಾಳಿಗೆ ಸೂಕ್ತ ಪ್ರತ್ಯುತ್ತರ ನೀಡಲಾಗಿದೆ ಎಂದು ಬಿಎಸ್‌ಎಫ್ ಮೂಲಗಳು ತಿಳಿಸಿದವು.
ಹುತಾತ್ಮ ಯೋಧನನ್ನು ಉತ್ತರ ಪ್ರದೇಶದ ಬಲಿಯಾ ಜಿಲ್ಲೆಯ ಬಿಎಸ್‌ಎಫ್ ಕಾನ್‌ಸ್ಟೇಬಲ್ ಬೃಜೇಂದ್ರ ಬಹಾದುರ ಸಿಂಗ್ ಎಂದು ಗುರುತಿಸಲಾಗಿದೆ.
Next Story





