ಜಿಎಂ ಸಾಸಿವೆ ಕೃಷಿಗೆ ಇನ್ನೂ ಅನುಮತಿ ನೀಡಿಲ್ಲ: ಕೇಂದ್ರ

ಹೊಸದಿಲ್ಲಿ,ಸೆ.15: ದೇಶದಲ್ಲಿ ತಳಿ ಪರಿವರ್ತಿತ(ಜಿಎಂ) ಸಾಸಿವೆ ಬೆಳೆಯ ವಾಣಿಜ್ಯಿಕ ಕೃಷಿಗೆ ತಾನಿನ್ನೂ ಅನುಮತಿಯನ್ನು ನೀಡಿಲ್ಲ ಎಂದು ಕೇಂದ್ರ ಸರಕಾರವು ಶುಕ್ರವಾರ ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿತು.
ನ.22ಕ್ಕೆ ಪ್ರಕರಣದ ಅಂತಿಮ ವಿಲೇವಾರಿಯನ್ನು ನಿಗದಿಗೊಳಿಸಿದ ನ್ಯಾಯಾಲಯವು, ಜಿಎಂ ಬೆಳೆ ಕುರಿತು ರಾಜ್ಯಸಭೆಯ ಉಪಸಮಿತಿಯ ಶಿಫಾರಸುಗಳಿಗೆ ಸರಕಾರವು ಇನ್ನೂ ಒಪ್ಪಿಗೆ ನೀಡಿಲ್ಲ ಎಂಬ ಹೆಚ್ಚುವರಿ ಸಾಲಿಸಿಟರ್ ಜನರಲ್(ಎಎಸ್‌ಜಿ) ಅವರ ಹೇಳಿಕೆ ಯನ್ನು ದಾಖಲಿಸಿಕೊಂಡಿತು.
ಉಪಸಮಿತಿಯು ತನ್ನ ವರದಿಯನ್ನು ಸಲ್ಲಿಸಿದ್ದು, ಅದನ್ನು ಸರಕಾರವು ಪರಿಶೀಲಿಸುತ್ತಿದೆ. ಅದರ ಶಿಫಾರಸುಗಳ ಕುರಿತಂತೆ ಸದ್ಯಕ್ಕೆ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಲಾಗಿಲ್ಲ ಎಂದು ಎಎಸ್‌ಜಿ ತಿಳಿಸಿದರು.
Next Story





