ಚಾಮರಾಜನಗರ: ಹೆತ್ತವರಿಗೆ ಬೇಡವಾದ ಹಸುಗೂಸು ರಕ್ಷಣೆ

ಚಾಮರಾಜನಗರ, ಸೆ.15: ಗಂಡು ಮಗುವೊಂದನ್ನು ಹೆತ್ತವರು ಮಧ್ಯರಾತ್ರಿ ಯಾರಿಗೂ ತಿಳಿಯದಂತೆ ಆಸ್ಪತ್ರೆಯ ಆವರಣದಲ್ಲೇ ಬಿಟ್ಟು ಪರಾರಿಯಾಗಿರುವ ಘಟನೆ ಚಾಮರಾಜನಗರದಲ್ಲಿ ಶನಿವಾರ ವರದಿಯಾಗಿದೆ.
ಚಾಮರಾಜನಗರ ಜಿಲ್ಲಾಸ್ಪತ್ರೆಯ ಆವರಣದಲ್ಲಿರುವ ವಾಹನ ನಿಲುಗಡೆ ಸ್ಥಳದಲ್ಲಿ ರಾತ್ರಿ 12 ರ ಸಮಯದಲ್ಲಿ ಯಾರೂ ಇಲ್ಲದ ವೇಳೆ ಮಗುವೊಂದು ಅಳುತ್ತಿದ್ದ ಶಬ್ದಕ್ಕೆ ಕೇಳಿ ಸೆಕ್ಯೂರಿಟಿ ಗಾರ್ಡ್ ಅತ್ತ ಹೋಗಿ ನೋಡಿದಾಗ ಚಳಿಯಲ್ಲಿ ಒದ್ದಾಡುತ್ತ ಕೂಗುತ್ತಿದ್ದ ಮಗುವನ್ನು ಕಂಡಿದ್ದಾರೆ. ಮಗುವಿನ ಹೆತ್ತವರಿಗಾಗಿ ಸುತ್ತಮುತ್ತ ಹುಡುಕಿದರೂ ಯಾರೂ ಪತ್ತೆಯಾಗದ ಹಿನ್ನೆಲೆಯಲ್ಲಿ ಆಸ್ಪತ್ರೆಯ ಸಿಬ್ಬಂದಿ ಮಕ್ಕಳ ಸಹಾಯ ವಾಣಿಗೆ ತಿಳಿಸಿದ್ದರು.
ಬಳಿಕ ಮಕ್ಕಳ ಸಹಾಯವಾಣಿಯ ಅರುಣ್ ಕುಮಾರ್ ಮತ್ತು ಮೋಹನ್ ಸ್ಥಳಕ್ಕೆ ಆಗಮಿಸಿ, ಮಗುವನ್ನು ಕೂಡಲೇ ನಿಗಾ ಘಟಕ ದಲ್ಲಿರಿಸಿ ಚಿಕಿತ್ಸೆ ಕೊಡಿಸುವಲ್ಲಿ ಸಫಲರಾಗಿದ್ದಾರೆ.
Next Story





