ಮಾನಸಿಕ ರೋಗಿಗಳಿಗೆ ಹಗಲು ಆರೈಕೆ ಕೇಂದ್ರ
ಉಡುಪಿ, ಸೆ.15: ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧೀನದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಅಡಿಯಲ್ಲಿ ದೊಡ್ಡನಗುಡ್ಡೆ ಡಾ.ಎ.ವಿ.ಬಾಳಿಗಾ ಚಾರಿಟೀಸ್ ಟ್ರಸ್ಟ್ ಮೂಲಕ, ಗುಣಮುಖ ಹೊಂದಿದ ಮಾನಸಿಕ ರೋಗಿಗಳಿಗೆ ಹಗಲು ಆರೈಕೆ ಕೇಂದ್ರವನ್ನು ಡಾ.ಎ.ವಿ ಬಾಳಿಗಾ ಸ್ಮಾರಕ ಆಸ್ಪ್ರೆ ಪರಿಸರದಲ್ಲಿ ನಡೆಸಲಾಗುತ್ತಿದೆ.
ಇಲ್ಲಿ ಮಾನಸಿಕ ಹಾಗೂ ಸಾಮಾಜಿಕ ಕೌಶಲ್ಯ ಅಭಿವೃದ್ಧಿಯ ತರಬೇತಿ ಗಳನ್ನು ನುರಿತ ತಜ್ಞ ಮಾನಸಿಕ ವೈದ್ಯರು ಹಾಗೂ ಇತರ ನುರಿತ ತಜ್ಞರಿಂದ ಮೂರು ತಿಂಗಳ ಕಾಲ ಉಚಿತವಾಗಿ ನೀಡಲಾಗುವುದು. ಈ ಸೇವೆ ಬಯಸುವ ಸಾರ್ವಜನಿಕರು ಕಾರ್ಯಕ್ರಮದ ಪ್ರಯೋಜನವನ್ನು ಪಡೆಯಲು ಹಾಗೂ ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ: 9538886291ನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
Next Story





