Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುಗ್ಗಿ
  3. ಮಲೆನಾಡಿನಲ್ಲಿ ಹೆಗ್ಗಾಲು ಅಣಬೆ ವೈಭವ

ಮಲೆನಾಡಿನಲ್ಲಿ ಹೆಗ್ಗಾಲು ಅಣಬೆ ವೈಭವ

ಕಲ್ಕುಳಿ ವಿಠಲ ಹೆಗಡೆಕಲ್ಕುಳಿ ವಿಠಲ ಹೆಗಡೆ16 Sept 2017 6:32 PM IST
share
ಮಲೆನಾಡಿನಲ್ಲಿ ಹೆಗ್ಗಾಲು ಅಣಬೆ ವೈಭವ

ಮುಂಗಾರು ಮಳೆ ಬೀಳುತ್ತಿದ್ದಂತೆ ಮಲೆನಾಡಿನಲ್ಲೆಲ್ಲ ಸುಂದರ ವಾದ ನಾನಾ ವಿಧದ ಚಿತ್ರ-ವಿಚಿತ್ರವಾದ ಅಣಬೆಗಳು ಏಳು ತ್ತವೆ. ಸೂಜಿಯಷ್ಟು ಸಣ್ಣದರಿಂದ ಹಿಡಿದು ಹೆಡಿಗೆಯಷ್ಟು ಅಗಲದವರೆಗೆ ನಾನಾ ಗಾತ್ರಗಳಲ್ಲಿ, ನಾನಾ ರೂಪಗಳಲ್ಲಿ ಮಣ್ಣು, ಕಲ್ಲು, ಮರ ಎಲ್ಲೆಂದರಲ್ಲಿ ಪರಾವಲಂಬಿಗಳಾಗಿ ತಾವೇ ತಾವಾಗಿ ಉದ್ಭವಿಸುತ್ತವೆ. ಅವುಗಳಲ್ಲಿ ಮನುಷ್ಯ ತಿನ್ನಬಾರದ ವಿಷಯುಕ್ತ ಅಣಬೆಗಳ ಸಂಖ್ಯೆಯೇ ಹೆಚ್ಚು.

ತಿನ್ನಬಹುದಾದ ಹೈಗನ ಅಣಬೆ, ಬೋಗಿ ಅಣಬೆ, ಗುರುತಾಲ್ ಅಣಬೆ, ಮರ ಅಣಬೆ, ಚಿಲ್ ಅಣಬೆ, ಅಕ್ಕಿ ಅಣಬೆ, ಕಲ್‌ಲ್ ಅಣಬೆ, ಕೂಳಿ ಅಣಬೆ, ಮುಖ್ಯವಾದವು ಇವೆಲ್ಲಕ್ಕಿಂತಲೂ ಅಣಬೆಗಳ ರಾಜನೆಂದೇ ಹೇಳಬಹು ದಾದದ್ದು ಹೆಗ್ಗಾಲು ಅಣಬೆ. ಹೆಗ್ಗಾಲು ಎಂದರೆ ಅದರ ಕಾಲು ದಪ್ಪವಾಗಿರುವುದಿಲ್ಲ ಉದ್ದವಾರು ವುದು. ಹೆಸರಿಗೆ ತಕ್ಕಂತೆ ಹೆಗ್ಗಾಲು ಅಣಬೆಯ ಬೇರು ಆಳದಲ್ಲಿರುತ್ತದೆ. ಹೆಗ್ಗಾಲು ಅಣಬೆಯ ಬೇರಿನ ಬುಡವನ್ನು ನೋಡಿದವರಿಲ್ಲ. ಅದು ಅಷ್ಟು ಸುಲಭಕ್ಕೆ ನೋಡಲು ಸಾಧ್ಯವೂ ಇಲ್ಲ ಎಂದು ಹೇಳುತ್ತಾರೆ.

ಬೇರೆಲ್ಲಾ ಅಣಬೆಗಳಿಗಿಂತ ಹೆಗ್ಗಾಲು ಅಣಬೆಗೆ ಹಲವು ವಿಶೇಷತೆಗಳಿವೆ. ಅಪರೂಪಕ್ಕೆ ಸಿಕ್ಕುವ ಹೆಗ್ಗಾಲು ಅಣಬೆಯನ್ನು ಯಾರಾದರು ಕಂಡರೆ ಕಂಡವರು ಮಾತ್ರವೇ ಕಿತ್ತುಕೊಂಡು ಬರುವಂತಿಲ್ಲ. ಅಕ್ಕ ಪಕ್ಕದವರನ್ನು ಕೂಗಿ ಕರೆದು ಒಟ್ಟಾಗಿ ಕೀಳಬೇಕು. ಕಿತ್ತ ಅಣಬೆಯನ್ನು ಅರಿವೆ ಬಟ್ಟೆಗೆ ಅಂದರೆ ಹತ್ತಿಯ ಬಟ್ಟೆಯಲ್ಲಿ ಹಾಕುವಂತಿಲ್ಲ. ಕಂಬಳಿಯ ಒಳಗೆ ಹಾಕಬಹುದು. ಹತ್ತಿ ಬಟ್ಟೆಗೆ ನೂಲಿನ ಬಟ್ಟೆ ಎನ್ನುತ್ತಾರೆ.

‘ನೂಲಿನ ಬಟ್ಟೆ ಮುಟ್ಟಿಸಿದರೆ ನೂರು ವರ್ಷ ಹುಟ್ಟಲ್ಲ’ ಎನ್ನುತ್ತದೆಯಂತೆ ಹೆಗ್ಗಾಲು ಅಣಬೆ. ಹೆಗ್ಗಾಲು ಅಣಬೆ ಹುಟ್ಟುವ ಜಾಗದಲ್ಲಿ ನಾಗರ ಹಾವುಗ ಳಿರುತ್ತವೆ. ಅಂದರೆ ಹೆಗ್ಗಾಲು ಅಣಬೆ ಹುಟ್ಟುವ ಜಾಗದಲ್ಲಿ ಕೊಪ್ಪರಿಗೆ ಇರುತ್ತದೆ ಎನ್ನುವ ನಂಬಿಕೆ ಇದೆ.

ಮಲೆನಾಡನ್ನು ಅಂತಹ ದೊಡ್ಡ ರಾಜ ಮನೆತನ ಆಳಿದ ಚರಿತ್ರೆ ಏನೂ ಇಲ್ಲ. ಕ್ರಿಸ್ತಶಕ ಆರನೆ ಶತಮಾನ ದಿಂದ ಕದಂಬರು ಆ ನಂತರದಲ್ಲಿ ಉತ್ತರದಿಂದ ಬಂದ ಜೈನರು ಹುಂಬುಚದಲ್ಲಿ ರಾಜಧಾನಿ ಮಾಡಿ ಅಲ್ಲಿಂದ ಕಾರ್ಕಳ, ಕಳಸ, ಬೊಗ್ಗುಂಜಿ ಈ ಮಲೆ ನಾಡಿನ ಪ್ರದೇಶದಲ್ಲಿ ಸಾವಿರ ವರ್ಷ ಆಳಿದರೂ ಅವರ ಸಾಮ್ರಾಜ್ಯ ಅಖಂಡವಾಗಿ ಇದ್ದಂತೇನೂ ಕಾಣುವುದಿಲ್ಲ. ಹೊಯ್ಸಳರು ಅರೆ ಮಲೆನಾಡಿನ ಪ್ರದೇಶದಲ್ಲಿ ತಮ್ಮ ಸಾಮ್ರಾಜ್ಯ ವಿಸ್ತರಿಸಿದರು. ಅಂತಹಸಾಮ್ರಾಜ್ಯಗಳೂ ಸಂಪತ್ತುಗಳೂ ಬಂಗಾರದ ನಾಣ್ಯವಾಗಿ ಕೊಪ್ಪರಿಗೆಯಲ್ಲಿ ಹುಗಿದಿಡುವಷ್ಟು ಇದ್ದಿರಲಾರದು ಎನಿಸುತ್ತದೆ.

ಆದರೆ ದಟ್ಟ ಮಲೆನಾಡಿನ ಬಹುತೇಕ ಕಡೆ ಕೊಪ್ಪರಿಗೆ ಇತ್ತು, ಅದು ಭಾರೀ ಮಳೆಯಲ್ಲಿ ಹೊಳೆಗೆ ಜಾರಿ ಹರಿದು ಹೋಯಿತು ಎಂದು ಕತೆ ಹೇಳುವ ದೊಡ್ಡ ದೊಡ್ಡ ಹೊಂಡಗಳು ಕಾಣ ಸಿಗುತ್ತವೆ. ನಿಜವಾಗಿಯೂ ಹೆಗ್ಗಾಲು ಅಣಬೆ ಒಂದು ಪರಿಸರ ವಿಸ್ಮಯವೇ. ಅದರ ಬೇರಿನ ಬುಡವನ್ನು ಕಂಡವರಾ ರಿಲ್ಲ. ಕಾಣುವುದೂ ಅಷ್ಟು ಸುಲಭವಲ್ಲ, ಬುಡಸಹಿತ ಅದು ಬರುವುದೂ ಇಲ್ಲ. ಹಾಗಾದರೆ

ಹೆಗ್ಗಾಲು ಅಣಬೆಯು ಹೇಗೆ ಹುಟ್ಟುತ್ತದೆ, ಹೇಗೆ ಬೆಳೆಯುತ್ತದೆ, ಅದರ ವಿಸ್ಮಯವೇನು? ಹೆಗ್ಗಾಲು ಅಣಬೆ ಮೃಗಶಿರ ಮಳೆಯಿಂದ ಪೂರ್ವ ಹಿಂಗಾರು, ಮುಂಗಾರುವರೆಗೂ ಎಲ್ಲಾ ಮಳೆಗಳು ಸರಿ ಯಾಗಿ ಸುರಿದು ಮಣ್ಣೆಲ್ಲ ತೇವಗೊಂಡು ಮಣ್ಣಿನಲ್ಲಿ ಜಲದ ಬುಗ್ಗೆ ಏಳುವ ಸಮಯದ ಮಧ್ಯ ಮಳೆಗಾಲದಲ್ಲಿ ಹುಟ್ಟುವಂತಹದ್ದು. ಮುಂಗಾರು ಮಳೆಯಲ್ಲಿ ನಿರಂತರ ಮೋಡಗಳು ಬರುವುದರಿಂದ ಗುಡುಗು ಸಿಡಿಲಿನ ಆರ್ಭಟ ಇರುವುದಿಲ್ಲ. ಮುಂಗಾರು ಮಳೆ ಸಾಕಷ್ಟು ಬಂದು ಮಧ್ಯೆ ಕೆಲವು ದಿನಗಳು ಮಳೆ ಬಾರದೆ ಹೊಳು ವಾಗುತ್ತದೆ. ಅಂತಹ ಸಮಯದಲ್ಲಿ ಅರಬ್ಬೀ ಸಮುದ್ರದಿಂದ ಕಾರ್ಮೋಡ ಗಳು ಬರದೆ ಬಿಳಿಯ ಮೋಡಗಳು ಹತ್ತಿಯ ರಾಶಿಯಂತೆ ಆಕಾಶದೆತ್ತರದಲ್ಲಿ ನಿಧಾನವಾಗಿ ಸಂಚರಿಸುತ್ತವೆ. ಅಂತಹ ಕಾಲದಲ್ಲಿ ಮಳೆ ಬರುವುದು ಅಪರೂಪ.ಆದರೆ ಗುಡುಗಿನ ಶಬ್ದ ಕೇಳುತ್ತದೆ. ಆ ಗುಡುಗಿಗೆ ಸಿಡಿಲಾಗುವಷ್ಟು ಶಕ್ತಿಯಿರು ವುದಿಲ್ಲ. ಅಂತಹ ಗುಡುಗಿಗೆ ಹುಸಿ ಗುಡುಗು ಎನ್ನುತ್ತಾರೆ.

ಹುಸಿ ಗುಡುಗು ಬರುವುದು ಮುಂಗಾರು ಮಳೆಯನ್ನು ತಮ್ಮ ಒಡಲಲ್ಲಿ ತುಂಬಿ ತುಳುಕುವಷ್ಟು ಶೇಖರಿಸಿಕೊಂಡು ಜಲಬುಗ್ಗೆಯಾಗಿ ಹೊರಹೊಮ್ಮಲು ಕಾಯುತ್ತಿರುತ್ತವೆ. ಅಂತಹ ಕಾಲದಲ್ಲಿ ಭೂಮಿ ನಡುಗುವಂತಹ ಹುಸಿಗು ಡುಗಿನ ಅಬ್ಬರ ಕೇಳುತ್ತದೆ. ಆ ಗುಡುಗಿನ ಶಬ್ದ ಕೇಳಿದ ಅನುಭವಿಗಳೆಲ್ಲ ‘ಏಳುವುದಕ್ಕೆ ಬರುವ ಗುಡುಗು ಇದು ಹೆಗ್ಗಾಲು ಅಣಬೆ ಏಳುತ್ತದೆ’ ಎಂದು ಹೇಳುತ್ತಾರೆ. ಮಾಮೂಲಿಯಾಗಿ ಹೆಗ್ಗಾಲು ಅಣಬೆಗಳು ಪ್ರತಿ ವರ್ಷ ಬಿಡದೆ ಏಳುವ ಜಾಗಗಳಿಗೆ ಗುಡುಗು ಬಂದಾಗೆಲ್ಲ ಹೋಗಿ ನೋಡಿ ಬರುತ್ತಾರೆ. ಅಪರೂಪಕ್ಕೆ ಅಣಬೆ ಸಿಕ್ಕುತ್ತದೆ. ಆದರೆ ನಿಜವಾಗಿಯೂ ಹೆಗ್ಗಾಲು ಅಣಬೆ ಹೇಗೆ ಏಳುತ್ತದೆ ಎಂದು ಕಂಡವರು ಬಹಳ ಕಡಿಮೆ.

ಒಂದು ಕಾಲದಲ್ಲಿ ಬೃಹತ್ತಾದ ಹೆಮ್ಮರಗಳಿದ್ದು ಅವುಗಳ ವಿಸ್ತಾರವಾದ ಬೇರಿನ ವ್ಯೆಹದ ಬೇರನ್ನು ಮರವರ್ಲೆ ಎನ್ನುವ ಗೆದ್ದಲು ಹುಳುಗಳು ನಿಧಾನ ವಾಗಿ ನಿರಂತರವಾಗಿಯೂ ತಿಂದು ಜೀರ್ಣಿಸಿಕೊಂಡು ಆ ಬೇರನ್ನೇ ತಮ್ಮ ಗೂಡಾಗಿ ಮಾಡಿಕೊಂಡಿರುತ್ತವೆ.

ನೂರಾರು ವರ್ಷಗಳಿಂದ ಆಳದ ಮಣ್ಣಿನಲ್ಲಿ ಗೆದ್ದಲುಗಳು ತಿಂದು ಜೀರ್ಣಿಸಿಕೊಂಡ ಆ ಬೇರಿನ ಅವಶೇಷಕ್ಕೆ ನೀರಿನ ತೇವ ತಾಗಿ ಅಣಬೆ ಅಭಿವೃದ್ಧಿಗೊಳ್ಳುವಷ್ಟು ಬೆಚ್ಚಗಿನ ವಾತಾವರಣ ಏರ್ಪಟ್ಟರೆ ಆ ವರ್ಲೆಯ ಗೂಡುಗಳಲ್ಲಿ ಸೃಷ್ಟಿಯಾಗುವ ಕಣ್ಣಿಗೆ ಕಾಣದಂತಹ ಹೆಗ್ಗಾಲು ಅಣಬೆಯ ಮೊಳಕೆಗಳು ಐದು ಆರು ಅಡಿ ಎತ್ತರ ಮಣ್ಣನ್ನು ಸೀಳಿಕೊಂಡು ಹೊರಗಡೆ ಬಂದು ಬೆಳ್ಳಿಯ ಕೊಡೆಗಳಂತೆ ಬಿಚ್ಚಿಕೊಂಡು ನಿಲ್ಲುತ್ತವೆ. ಯಾರು ಎಷ್ಟು ಅಗೆದು ಕಿತ್ತರೂ ಎರಡು ಮೂರು ಅಡಿ ಅಗೆದರೂ ಹೆಗ್ಗಾಲು ಅಣಬೆಯ ಬೇರಿನ ಬುಡ ಸಿಕ್ಕುವುದಿಲ್ಲ. ಹಾಗೆಯೇ ಬೇರನ್ನು ಎಳೆದರೆ ಹೆಚ್ಚೆಂದರೆ ಅರ್ಧ ಒಂದು ಅಡಿ ಉದ್ದದಲ್ಲಿ ತುಂಡಾಗಿ ಹೋಗುತ್ತದೆ. ಹೆಗ್ಗಾಲು ಅಣಬೆಯ ಭೂಗರ್ಭದ ವಿಸ್ಮಯವನ್ನು ನೋಡುವ ಅಗತ್ಯ ಅಣಬೆ ಆಯ್ದುಕೊಳ್ಳುವವರಿಗೆ ಇರುವುದಿಲ್ಲವಾದ್ದರಿಂದ ಕೈಗೆ ಸಿಕ್ಕಿದ ಅಣಬೆ ಗಳನ್ನು ಕಿತ್ತುಕೊಂಡು ಅದರಲ್ಲಿ ಬುಡದ ಬೇರು ಕಾಣಿಸುವುದಿಲ್ಲವಾದ್ದರಿಂದ ಹೆಗ್ಗಾಲು ಅಣಬೆಯ ಬಗ್ಗೆ ಅನೇಕ ದಂತೆ ಕಥೆಗಳು ಚಾಲ್ತಿಯಲ್ಲಿ ಇವೆ. ಆದರೆ ಎಲ್ಲಾ ಅಣಬೆಗಳಿಗೂ ಅನ್ವಯಿಸುವಂತಹ ಒಂದು ಮಾತೆಂದರೆ ಅಣಬೆ ಜಾತಿಗೆ ಸೇರಿದ ಮಲೆನಾಡಿನಲ್ಲಿ ಹುಟ್ಟುವ ಎಲ್ಲಾ ಅಣಬೆಗಳು ಮಳೆಯ ಕಾರಣದಿಂದಲೇ ಹುಟ್ಟುವವು ಆಗಿದ್ದಾವೆ. ಹೆಗ್ಗಾಲು ಅಣಬೆಗಳ ರಾಜನಂತಿದೆ.

share
ಕಲ್ಕುಳಿ ವಿಠಲ ಹೆಗಡೆ
ಕಲ್ಕುಳಿ ವಿಠಲ ಹೆಗಡೆ
Next Story
X