ತಾಯಿಯನ್ನು ರಕ್ಷಿಸಲು ಯತ್ನಿಸಿದ ಮೂವರು ಮಕ್ಕಳ ಸಾವು

ಭೋಪಾಲ್, ಸೆ.16: ಆತ್ಮಹತ್ಯೆಗೆ ಮುಂದಾದ ತಾಯಿಯನ್ನು ರಕ್ಷಿಸಲು ಮುಂದಾದ ಮೂವರು ಮಕ್ಕಳು ತಾವೇ ಬೆಂಕಿಗೆ ಬಲಿಯಾದ ದುರಂತ ಘಟನೆ ಮಧ್ಯಪ್ರದೇಶದ ದಮೋಹ್ ಎಂಬಲ್ಲಿ ನಡೆದಿದೆ.
30ರ ಹರೆಯದ ರಾಣಿ ಲೋಧಿ ಎಂಬಾಕೆ ತೀವ್ರವಾದ ಹೊಟ್ಟೆನೋವಿನಿಂದ ಬಳಲುತ್ತಿದ್ದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ನಡೆಸಲು ಮುಂದಾಗಿದ್ದಳು. ಈ ಸಂದರ್ಭ ಆಕೆಯ ಪುತ್ರಿಯರಾದ ಎರಡು ವರ್ಷದ ತುಲ್ಸಾ, ಐದು ವರ್ಷದ ಮುಸ್ಕಾನ್, ಹಾಗೂ ಏಳು ವರ್ಷದ ಮಾನ್ಸಿ ತಾಯಿಯನ್ನು ರಕ್ಷಿಸಲು ಮುಂದಾಗಿದ್ದು ತಾವೇ ಬೆಂಕಿಗೆ ಆಹುತಿಯಾಗಿದ್ದಾರೆ. ಶೇ.70ರಷ್ಟು ಸುಟ್ಟಗಾಯವಾಗಿರುವ ರಾಣಿ ಜಬಲ್ಪುರ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story





