ವಿವಿ ನೇಮಕದಲ್ಲಿ ಲಂಚ ಆರೋಪ: ಸಿಎಂ ವಿರುದ್ಧ ಎಸಿಬಿಗೆ ದೂರು
ಬೆಂಗಳೂರು, ಸೆ.16: ಹಂಪಿ ವಿಶ್ವವಿದ್ಯಾನಿಲಯ ನೇಮಕಾತಿ ಸಂಬಂಧ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಇಬ್ಬರು ಸಚಿವರ ವಿರುದ್ಧ ಕರ್ನಾಟಕ ಕಾರ್ಮಿಕ ವೇದಿಕೆ ಎಸಿಬಿಗೆ ದೂರು ನೀಡಿದೆ.
ಎರಡು ದಿನಗಳ ಹಿಂದೆ ಹಂಪಿ ವಿವಿಯ ಕುಲಪತಿ ಮಲ್ಲಿಕಾ ಘಂಟಿ ಅವರು ವೇದಿಕೆಯೊಂದರಲ್ಲಿ ಸೂಟ್‌ಕೇಸ್ ವಿಷಯ ಪ್ರಸ್ತಾಪಿಸಿದ್ದರು. ಮಲ್ಲಿಕಾಘಂಟಿ ಅವರ ಆರೋಪ ವಿವಿಗಳ ನೇಮಕದಲ್ಲಿ ಸಿಎಂ ಲಂಚ ಪಡೆದಿದ್ದಾರೆ ಎಂಬುದಕ್ಕೆ ಸಾಕ್ಷಿ ಒದಗಿಸುತ್ತದೆ ಎಂದು ಆರೋಪಿಸಿ ವೇದಿಕೆ ಅಧ್ಯಕ್ಷ ನಾಗೇಶ್ ಎಂಬುವರು ಎಸಿಬಿಗೆ ದೂರು ನೀಡಿದ್ದಾರೆ.
ಯಾರಿಗೆ ಲಂಚ ನೀಡಿದ್ದಾರೆ ಎಂಬುದನ್ನು ತಿಳಿದುಕೊಳ್ಳುವ ನಿಟ್ಟಿನಲ್ಲಿ ಪ್ರೊ.ಮಲ್ಲಿಕಾ ಘಂಟಿ ವಿರುದ್ಧವೂ ತನಿಖೆಯಾಗಬೇಕು. ಅಲ್ಲದೆ, ಈ ಹೇಳಿಕೆಯನ್ನು ಸಮರ್ಥಿಸಿಕೊಂಡ ಸಚಿವ ರಮೇಶ್ ಕುಮಾರ್ ಹಾಗೂ ಬಸವರಾಜ ರಾಯರೆಡ್ಡಿ ವಿರುದ್ಧ ಮತ್ತು ವಿವಿಗಳ ಭ್ರಷ್ಟಚಾರದ ಬಗ್ಗೆಯೂ ತನಿಖೆ ನಡೆಸುವಂತೆ ಎಸಿಬಿ ಅಧಿಕಾರಿಗಳಿಗೆ ನೀಡಿರುವ ದೂರಿನಲ್ಲಿ ಮನವಿ ಮಾಡಿದ್ದಾರೆ.
Next Story





