ಕೋಟ್ಯಂತರ ರೂ. ಆದಾಯದ ತಂಪು ಪಾನಿಯ ಜಾಹೀರಾತು ಮಾಡಲು ಕೊಹ್ಲಿ ನಿರಾಕರಿಸಿದ್ದೇಕೆ ?
.jpg)
ಹೊಸದಿಲ್ಲಿ, ಸೆ.16: ಭಾರತದ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಕೋಟ್ಯಂತರ ರೂಪಾಯಿ ಆದಾಯದ ತಂಪು ಪಾನೀಯ ಜಾಹೀರಾತು ಮಾಡಲು ನಿರಾಕರಿಸಿದ್ದಾರೆ. ಕೊಹ್ಲಿ ತಂಪು ಪಾನೀಯ ಕುಡಿಯುವುದಿಲ್ಲ. ಈ ಕಾರಣದಿಂದಾಗಿ ಅವರು ಜಾಹೀರಾತು ಮಾಡಲು ಮಾಡಲು ನಿರಾಕರಿಸಿದ್ದಾರೆ.
ತಾವು ಬಳಕೆ ಮಾಡಿ, ವಿಶ್ವಾಸವುಳ್ಳ ಉತ್ಪನ್ನಗಳನ್ನು ಮಾತ್ರ ಪ್ರೊಮೋಟ್ ಮಾಡಲು ಕೊಹ್ಲಿ ತೀರ್ಮಾನಿಸಿದ್ದಾರೆ ಎಂದು ತಿಳಿದುಬಂದಿದೆ.
ತಾನು ಬಳಕೆ ಮಾಡದ ಯಾವುದೇ ವಸ್ತುವನ್ನು ಇನ್ನೊಬ್ಬರಿಗೆ ಬಳಸಲು ಹೇಳಲಾರೆ ಎನ್ನುವುದು ಕೊಹ್ಲಿ ನಿಲುವು. ತಾನು ಮಾಡದ ಯಾವುದೇ ಕಾರ್ಯವನ್ನು ತನ್ನ ಸಹ ಆಟಗಾರರಿಂದ ಮಾಡಿಸಲು ಹೇಳಲಾರೆ ಎಂದು ಕೊಹ್ಲಿ ಒಂದೊಮ್ಮೆ ಪತ್ರಕರ್ತರ ಮುಂದೆ ಬಹಿರಂಗ ಪಡಿಸಿದ್ದರು.
ಕೊಹ್ಲಿ ತಾನು ಕೈಗೊಂಡ ಕಾರ್ಯದಲ್ಲಿ ಯಶಸ್ಸು ದೊರೆತರೆ ಆ ರೀತಿ ಮಾಡಲು ತಂಡದ ಸಹ ಆಟಗಾರರಲ್ಲಿ ಹೇಳುತ್ತಾರೆ. ಪ್ರಸ್ತುತ ಬ್ಯಾಡ್ಮಿಂಟನ್‌ನ ರಾಷ್ಟ್ರೀಯ ಕೋಚ್ ಅಗಿರುವ ಪಿ.ಗೋಪಿಚಂದ್ ಎರಡು ದಶಕಗಳ ಹಿಂದೆ ಇದೇ ರೀತಿಯ ಲಾಭದಾಯಕ ಆಫರ್‌ನ್ನು ತಿರಸ್ಕರಿಸಿದ್ದರು.ಅವರು 2001ರಲ್ಲಿ ಆಲ್‌ಇಂಡಿಯಾ ಪ್ರಶಸ್ತಿ ಜಯಿಸಿದಾಗ ಅವರ ಜನಪ್ರಿಯತೆಯನ್ನು ತಮ್ಮ ಉತ್ಪನ್ನಗಳ ಜಾಹೀರಾತಿಗೆ ಬಳಸಿಕೊಳ್ಳಲು ತಂಪು ಪಾನೀಯ ಕಂಪೆನಿಗಳು ಮುಗಿ ಬಿದ್ದಾಗ ಗೋಪಿಚಂದ್ ಕಂಪೆನಿಗಳ ಆಫರ್‌ನ್ನು ನಯವಾಗಿ ತಿರಸ್ಕರಿಸಿದ್ದರು.
ಗೋಪಿಚಂದ್ ಅವರು ತಂಪು ಪಾನೀಯ ಕುಡಿಯುವುದಿಲ್ಲ. ಅವರು ಯೋಗ, ಧ್ಯಾನ ಮತ್ತು ಕಟ್ಟುನಿಟ್ಟಾದ ಆಹಾರ ಕ್ರಮವನ್ನು( ಪಥ್ಯಾಹಾರ) ಅನುಸರಿಸುತ್ತಾರೆ. ಈ ಕಾರಣದಿಂದಾಗಿ ಗೋಪಿಚಂದ್ ತಂಪು ಪಾನೀಯ ಜಾಹೀರಾತು ಮಾಡಲು ನಿರಾಕರಿಸಿದ್ದರು.







