ಇಂಧನ ಬೆಲೆ ಹೆಚ್ಚಳ ಖಂಡಿಸಿ ಎನ್ ಎಸ್ ಯುಐ ಪ್ರತಿಭಟನೆ

ತುಮಕೂರು, ಸೆ.16:ಇಂಧನ ಬೆಲೆ ನಿರಂತರ ಹೆಚ್ಚಳವನ್ನು ಖಂಡಿಸಿ ಎನ್ ಎಸ್ ಯುಐ ವತಿಯಿಂದ ಶನಿವಾರ ಪ್ರತಿಭಟನೆ ನಡಸಲಾಯಿತು.
ನಗರದ ಟೌನ್‍ಹಾಲ್ ವೃತ್ತದಲ್ಲಿ ಸಮಾವೇಶಗೊಂಡ ಎನ್ ಎಸ್ ಯುಐ ಪ್ರತಿನಿಧಿಗಳು ಕೇಂದ್ರ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಈ ವೇಳೆ ಎನ್ ಎಸ್ ಯುಐ ಜಿಲ್ಲಾಧ್ಯಕ್ಷ ಸುಮುಖ ಚಂದ್ರಶೇಖರ್ ಮಾತನಾಡಿ, ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷದ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಪೆಟ್ರೋಲ್‍ನ ಬೆಲೆ ಕೇವಲ ರೂ. 47 ಇತ್ತು. ಆದರೆ ಈಗ ಕೇಂದ್ರದಲ್ಲಿ ಬಿಜೆಪಿ ಸರಕಾರ ಆಡಳಿತ ಮಾಡುತ್ತಿದ್ದು, ಇಂದು ಪೆಟ್ರೋಲ್‍ನ ಬೆಲೆ ರೂ. 74 ಆಗಿದೆ. ಪ್ರತಿ ದಿನ ಈ ರೀತಿಯಾಗಿ ಹೆಚ್ಚಾಗುತ್ತಿದ್ದು, ಸಾಮಾನ್ಯರ ಮೇಲೆ ಹೊರೆ ಏನಿಸಿದೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬರುವ ಮುನ್ನ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಪ್ರತಿಯೊಬ್ಬ ನಾಗರಿಕರ ಖಾತೆಗೆ ರೂ.15 ಲಕ್ಷ ರೂ. ಹಾಕುತ್ತೇನೆ ಎಂದು ಪೊಳ್ಳು ಭರವಸೆಗಳನ್ನು ಹೇಳುತ್ತ ಬರೀ ಸುಳ್ಳು ಹೇಳಿಕೊಂಡು ಅಧಿಕಾರ ನಡೆಸುತ್ತಿದ್ದಾರೆ. ಆದ್ದರಿಂದ ಮುಂದಿನ ದಿನಗಳಲ್ಲಿ ಮತದಾರರು ಬಿಜೆಪಿ ಸರಕಾರಕ್ಕೆ ಪಾಠ ಕಲಿಸುವುದು ತುಂಭಾ ಸನಿಹದಲ್ಲಿದೆ ಎಂದರು.
ಪ್ರತಿಭಟನೆಯಲ್ಲಿ ನಗರಾಧ್ಯಕ್ಷರಾದ ಅನಿಲ್‍ಕುಮಾರ್ ಜೆ. ಉಲ್ಲಾಸ್ ಕಡಬ, ದೀಕ್ಷೀತ್, ಪ್ರತೀಕ, ವಿಶ್ವರಾಧ್ಯ, ಯಶು, ದಿವಾಕರ್ ನಾಯ್ಡು, ರಾಜೇಶ್ ದೊಡ್ಮನೆ, ಮೋಹನ್ ಕುಮಾರ್, ಹರ್ಷದ್, ಸುರೇಶ್ ಇನ್ನು ಮುಂತಾದವರಿದ್ದರು.







