ಸ್ಕಿಲ್‌ಗೇಮ್‌ಗೆ ದಾಳಿ: ಐವರ ಬಂಧನ
ಮಂಗಳೂರು, ಸೆ. 16: ನಗರದ ಅಂಬೇಡ್ಕರ್ ವೃತ್ತದ ಬಳಿಯಿರುವ ಕಟ್ಟಡವೊಂದರಲ್ಲಿ ಹಣವನ್ನು ಪಣವಾಗಿಟ್ಟು ವಿಡಿಯೋಗೇಮ್ ಆಡುತ್ತಿದ್ದ ಆರೋಪದ ಮೇಲೆ ಕದ್ರಿ ಠಾಣಾ ಪೊಲೀಸರು ಶನಿವಾರ ಐವರನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಸುಧೀರ್ ಕುಮಾರ್, ಚೇತಕ್, ಪ್ರಸಾದ್, ಅಬ್ದುಲ್ ಲತೀಫ್, ಪ್ರಕಾಶ್ ಶೆಟ್ಟಿ ಎಂದು ಗುರುತಿಸಲಾಗಿದೆ.
ಇವರು ನಗರದ ಅಂಬೇಡ್ಕರ್ ವೃತ ಬಳಿಯಿರುವ ಕಟ್ಟಡವೊಂದರ ನೆಲ ಮಹಡಿಯಲ್ಲಿರುವ ಕಾರ್ಯಾಚರಿಸುತ್ತಿರುವ ರಿಕ್ರಿಯೇಷನ್ ಕ್ಲಬ್‌ಗೆ ದಾಳಿ ನಡೆಸಿರುವ ಪೊಲೀಸರು ಅಲ್ಲಿ ಹಣವನ್ನು ಪಣವಾಗಿಟ್ಟು ವಿಡಿಯೋ ಗೇಮ್ ಆಡುತ್ತಿದ್ದ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ವಿಡಿಯೋ ಗೇಮ್‌ಗೆ ಉಪಯೋಗಿಸಿದ ವಸ್ತುಗಳು ಮತ್ತು 7,000 ರೂ. ನಗದನ್ನು ವಶಪಡಿಸಿಕೊಂಡಿದ್ದಾರೆ. ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





