ಪಾರ್ಕ್ ಮಾಡಿದ್ದ ದ್ವಿಚಕ್ರ ವಾಹನದಿಂದ ಸೊತ್ತು ಕಳವು
ಮಂಗಳೂರು, ಸೆ. 16: ಕುಂಟಿಕಾನ ಸಮೀಪದ ಹೊಟೇಲೊಂದರ ಪಾರ್ಕಿಂಗ್ ಜಾಗದಲ್ಲಿ ಇರಿಸಲಾಗಿದ್ದ ಸ್ಕೂಟರ್‌ನಿಂದ ಐಪಾಡ್ ಸೇರಿದಂತೆ ಇತರ ದಾಖಲೆಗಳನ್ನು ಕಳವು ಮಾಡಿದ ಘಟನೆ ಶನಿವಾರ ನಡೆದಿದೆ.
ಶನಿವಾರ ಬೆಳಗ್ಗೆ 7:45ಕ್ಕೆ ಗಣೇಶ್ ಪ್ರಸಾದ್ ಎಂಬವರು ತನ್ನ ದ್ವಿಚಕ್ರ ವಾಹನವನ್ನು ಕುಂಟಿಕಾನ ಆಸ್ಪತ್ರೆ ಎದುರಿನಲ್ಲಿರುವ ಹೋಟೆಲೊಂದರ ಪಾರ್ಕಿಂಗ್ ಜಾಗದಲ್ಲಿ ಪಾರ್ಕ್ ಮಾಡಿದ್ದರು. ಹೊಟೇಲ್‌ನಲ್ಲಿ ಉಪಹಾರ ಮುಗಿಸಿ ವಾಪಸ್ ಬಂದಾಗ ವಾಹನದ ಸೀಟ್ ಓಪನ್ ಆಗಿದ್ದು, ಸೀಟಿನ ಡಿಕ್ಕಿಯಲ್ಲಿರಿಸಿದ್ದ ಆಪಲ್ ಕಂಪೆನಿಯ ಐಪಾಡ್, ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿ, ಡ್ರೈವಿಂಗ್ ಲೈಸೆನ್ಸ್‌ನ ಜೆರಾಕ್ಸ್ ಪ್ರತಿ ಕಳವು ಆಗಿರುವದು ಗೊತ್ತಾಗಿದೆ. ಕಳವಾದ ಸೊತ್ತಿನ ಒಟ್ಟು ಮೌಲ್ಯ ರೂ. 20 ಸಾವಿರ ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಗಣೇಸ್ ಅವರು ಉರ್ವ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
Next Story





