ಚೀನಾದಿಂದ ಇರಾನ್‌ಗೆ 10 ಬಿಲಿಯ ಡಾ. ಸಾಲ

ಟೆಹರಾನ್, ಸೆ. 16: ಚೀನಾ ಸರಕಾರ ಒಡೆತನದ ಹೂಡಿಕೆ ಸಂಸ್ಥೆಯೊಂದು ಇರಾನ್‌ನ ಬ್ಯಾಂಕ್‌ಗಳಿಗೆ 10 ಬಿಲಿಯ ಡಾಲರ್ (ಸುಮಾರು 64,150 ಕೋಟಿ ರೂಪಾಯಿ) ಸಾಲ ನೀಡಿದೆ ಎಂದು ಇರಾನ್‌ನ ಸೆಂಟ್ರಲ್ ಬ್ಯಾಂಕ್ ಅಧ್ಯಕ್ಷ ವಲಿಯುಲ್ಲ ಸೈಫ್ ಶನಿವಾರ ತಿಳಿಸಿದರು.
ಈ ಸಂಬಂಧದ ಒಪ್ಪಂದಕ್ಕೆ ಚೀನಾದ ಸಿಐಟಿಐಸಿ ಹೂಡಿಕೆ ಗುಂಪು ಮತ್ತು ವಲಿಯುಲ್ಲ ಸೈಫ್ ನೇತೃತ್ವದ ಇರಾನ್ ಬ್ಯಾಂಕ್‌ಗಳ ನಿಯೋಗ ಬೀಜಿಂಗ್‌ನಲ್ಲಿ ಸಹಿ ಹಾಕಿತು.
ನೀರು, ವಿದ್ಯುತ್ ಮತ್ತು ಸಾರಿಗೆ ಯೋಜನೆಗಳಿಗೆ ಈ ನಿಧಿಗಳಿಂದ ಸಾಲ ನೀಡಲಾಗುವುದು ಎಂದು ‘ಇರಾನ್ ಡೇಲಿ’ ತಿಳಿಸಿದೆ.
Next Story





