ಅಕ್ರಮ ಕಸಾಯಿಖಾನೆಗೆ ದಾಳಿ: ಆರೋಪಿ ಸೆರೆ
ಬಂಟ್ವಾಳ, ಸೆ. 16: ತಾಲೂಕಿನ ಸಂಗಬೆಟ್ಟು ಗ್ರಾಮದ ಕೆರೆಬಳಿ ಎಂಬಲ್ಲಿ ನಡೆಯುತ್ತಿದ್ದ ಅಕ್ರಮ ಕಸಾಯಿಖಾನೆಗೆ ಬಂಟ್ವಾಳ ಗ್ರಾಮಾಂತರ ಠಾಣಾಧಿಕಾರಿ ಉಮೇಶ್ ಕುಮಾರ್ ನೇತೃತ್ವದ ಪೊಲೀಸರು ಶನಿವಾರ ದಾಳಿ ನಡೆಸಿ ಹಲವು ಜಾನುವಾರು ಸಹಿತ ಆರೋಪಿಯನ್ನು ಬಂಧಿಸಿದ ಘಟನೆ ನಡೆದಿದೆ.
ಆರೋಪಿಯನ್ನು ಸ್ಥಳೀಯ ನಿವಾಸಿ ಅಶ್ಫಾಕ್ (25) ಎಂದು ಗುರುತಿಸಲಾಗಿದೆ. ಈತನಿಂದ 3 ದನ, 1 ಎಮ್ಮೆ ಮತ್ತಿತರ ಸಾಮಗ್ರಿ ವಶಪಡಿಸಿ ಕೊಳ್ಳಲಾಗಿದೆ. ಈತನು ಕಳೆದ ಹಲವು ಸಮಯದಿಂದ ಅಕ್ರಮವಾಗಿ ಕಸಾಯಿಖಾನೆ ನಡೆಸುತ್ತಿರುವ ಬಗ್ಗೆ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದರು ಎಂದು ಗ್ರಾಮಾಂತರ ಠಾಣೆ ಪೊಲೀಸರು ತಿಳಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಪೊಲೀಸ್ ಸಿಬ್ಬಂದಿ ವಾಸು ನಾಯ್ಕ, ಸುರೇಶ ಕುಮಾರ್, ಜನಾರ್ದನ, ಮೋಹನ, ಕುಮಾರ್ ಮತ್ತಿತರರು ಇದ್ದರು.
Next Story





