Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಪೊಳಲಿ ರಾಜರಾಜೇಶ್ವರಿ ದೇವಳದಲ್ಲಿ ಶಾಸನ...

ಪೊಳಲಿ ರಾಜರಾಜೇಶ್ವರಿ ದೇವಳದಲ್ಲಿ ಶಾಸನ ಪತ್ತೆ

ಇತಿಹಾಸ ತಜ್ಞ ಡಾ. ಪುಂಡಿಕಾ ಗಣಪಯ್ಯ ಭಟ್‌ರಿಂದ ಪರಿಶೀಲನೆ

ವಾರ್ತಾಭಾರತಿವಾರ್ತಾಭಾರತಿ16 Sept 2017 11:45 PM IST
share
ಪೊಳಲಿ ರಾಜರಾಜೇಶ್ವರಿ ದೇವಳದಲ್ಲಿ ಶಾಸನ ಪತ್ತೆ

ಮೂಡುಬಿದಿರೆ, ಸೆ.16 : ಜಿಲ್ಲೆಯ ಇತಿಹಾಸ ಪ್ರಸಿದ್ಧ ಪೊಳಲಿಯ ಶ್ರೀ ರಾಜರಾಜೇಶ್ವರಿ ದೇವಳದ ಜೀರ್ಣೋದ್ಧಾರ ಕಾರ್ಯಗಳು ನಡೆಯುತ್ತಿದ್ದ ಸಂದಂರ್ಭದಲ್ಲಿ ಶಿಲಾಶಾಸವೊಂದು ಪತ್ತೆಯಾಗಿದ್ದು, ಈ ಶಾಸನವನ್ನು ಪರಿಶೀಲಿಸಿ ಇತಿಹಾಸ ಸಂಶೋಧಕ ಡಾ. ಪುಂಡಿಕಾ ಗಣಪಯ್ಯ ಭಟ್ಟ ಅವರು ಅಧ್ಯಯನ ಮಾಡಿದ್ದಾರೆ.

ದೇವಾಲಯದ ಗರ್ಭಗೃಹದ ಹೊರಗೆ ಎಡಭಾಗದಲ್ಲಿ ಪತ್ತೆಯಾದ ಈ ಶಾಸನ ಫಲಕದ ಹಿಂಭಾಗವನ್ನು ಲೋಹದ ದೇವಾತಾ ವಿಗ್ರಹಗಳನ್ನು ನಿತ್ಯಾಭಿಷೇಕ ಮಾಡುವ ಪೀಠವಾಗಿ ಬಳಸಲಾಗುತ್ತಿತ್ತು. ಈ ಶಾಸನವಲ್ಲದೆ ಜೀರ್ಣೋದ್ಧಾರ ಕಾಮಗಾರಿಗಳ ಸಂದರ್ಭ ಶಾಸನ ರಹಿತವಾದ ಮೂರು ವೀರಗಲ್ಲುಗಳೂ ತುಂಡಾದ ಸ್ಥಿತಿಯಲ್ಲಿ ಪತ್ತೆಯಾಗಿವೆ.

ಸುಂದರವಾಗಿ ರೂಪಿಸಲಾದ ಈ ಶಿಲಾಫಲಕದಲ್ಲಿ ಅಕ್ಷರಗಳನ್ನು 20 ಸಾಲುಗಳಲ್ಲಿ ಅತ್ಯಂತ ಸ್ಪುಟವಾಗಿ ಕೆತ್ತಲಾಗಿದೆ. ಶಾಸನ ಫಲಕದ ತಳಭಾಗದಲ್ಲಿ ಎರಡು ಸಿಂಹಗಳ ನಡುವಿನಲ್ಲಿ ಒರ್ವ ವ್ಯಕ್ತಿಯು ರಾಜಭಂಗಿಯಲ್ಲಿ ಸ್ತ್ರೀಯೊಂದಿಗೆ ಆಸೀನನಾಗಿರುವ ಚಿತ್ರಣವಿದೆ.

ಶಾಸನದ ಬರಹವಿರುವ ಭಾಗದ ಮಧ್ಯಭಾಗದಲ್ಲಿ ಯಾವುದೋ ಕಾರಣಕ್ಕಾಗಿ ಕಲ್ಲಿನ ಚೆಕ್ಕೆಗಳನ್ನು ವೃತ್ತಾಕಾರವಾಗಿ ಕೆತ್ತಿತೆಗೆಯಲಾಗಿದ್ದು ಇದರಿಂದಾಗಿ ಕೆಲವು ಮಹತ್ವದ ಅಕ್ಷರಗಳು ನಾಶಗೊಂಡಿರುವುದಾಗಿ ಇತಿಹಾಸ ತಜ್ಞ ಡಾ. ಪುಂಡಿಕಾ ಗಣಪಯ್ಯ ಭಟ್ಟ ಅವರು ಅಭಿಪ್ರಾಯಪಟ್ಟಿದ್ದಾರೆ. 

ಸ್ವಸ್ತಿ ಶ್ರೀ ಗಣಪತಯೇ ನಮ: ಎಂದು ಆರಂಭವಾಗುವ ಶಾಸನದ ಎರಡನೆಯ ಸಾಲಿನ ಕೊನೆಯಲ್ಲಿರುವ 1039 ಎಂಬ ಸಂಖ್ಯೆಯನ್ನು ಶಕ ವರ್ಷವೆಂದು ಪರಿಗಣಿಸುವುದು ಸೂಕ್ತವಾಗಿದ್ದು ಅದರಂತೆ ಈ ಶಾಸನದ ಕಾಲ ಕ್ರಿ.ಶ.1117 ಕ್ಕೆ ಸರಿಹೊಂದುತ್ತದೆ ಎಂದು ಗಣಪಯ್ಯ ಭಟ್ ಹೇಳುತ್ತಾರೆ.

ಆಳುಪ ವಂಶದ ಅರಸನಾದ ಕುಲಶೇಖರನ ಆಳ್ವಿಕೆಯಲ್ಲಿ, ಆತನ ಭೃತ್ಯನಾಗಿದ್ದ ಬಿಳಿವೆಯ ನಂಬಿ ಎಂಬಾತ ಆತ್ಮಾರ್ಪಣೆಯನ್ನು (ಜೋಳವಾಳಿ) ಮಾಡಿ ವೀರಸಾಹಸವನ್ನು ಮೆರೆದ ವಿಚಾರವನ್ನು ಈ ಶಾಸನ ದಾಖಲಿಸುತ್ತದೆ. ಶಾಸನದ 14 ನೇ ಸಾಲಿನಲ್ಲಿ ಪಾಂಡ್ಯ ಪಟ್ಟಿಗ (ದೇವ) ಎಂಬ ಹೆಸರಿನ ಉಲ್ಲೇಖವಿದ್ದು ಇದು ಅರಸನಾದ ಕುಲಶೇಖರನ ಬಿರುದು ಅಥವಾ ಉಪನಾಮವೆಂದು ಪರಿಗಣಿಸಬಹುದು ಎಂದವರು ಅಭಿಪ್ರಾಯಪಟ್ಟಿದ್ದಾರೆ.

ಪ್ರಸ್ತುತ ಶಾಸನದಲ್ಲಿ ಬರುವ ಆಳ್ವಖೇಡಮರುಸಾಸಿರ ಎಂಬ ಉಲ್ಲೇಖ ಅತ್ಯಂತ ಮಹತ್ವದ್ದು. ತುಳುನಾಡನ್ನು ಆಳ್ವಖೇಡ ಆರುಸಾವಿರ ಎಂಬ ಹೆಸರಿನಿಂದ ಗುರುತಿಸುವ ಕೆಲವು ಶಾಸನಗಳು ತುಳುನಾಡಿನ ಹೊರಭಾಗದ ಜಿಲ್ಲೆಗಳಲ್ಲಷ್ಟೆ ಈತನಕ ಕಂಡುಬಂದಿದ್ದು, ಪ್ರಸ್ತುತ ಶಾಸನ ಹೊರತುಪಡಿಸಿದರೆ ತುಳುನಾಡಿನ ಒಳಗೆ ಈತನಕ ಪತ್ತೆಯಾದ ಯಾವುದೇ ಶಾಸನದಲ್ಲೂ ಈ ರೀತಿಯ ಉಲ್ಲೇಖ ಕಂಡುಬಂದಿಲ್ಲ ಎಂಬುದು ಈ ಶಾಸನದ ಐತಿಹಾಸಿಕ ಮಹತ್ವವನ್ನು ಎತ್ತಿಹಿಡಿಯುವ ಅಂಶ ಎಂದು ಅವರು ತಿಳಿಸಿದ್ದಾರೆ.

ಪ್ರಸ್ತುತ ಪೊಳಲಿಯಲ್ಲಿ ಬೆಳಕಿಗೆ ಬಂದಿರುವ ಕುಲಶೇಖರ ಪಾಂಡ್ಯ ಪಟ್ಟಿಗ ಶಾಸನವು ಆಳುಪಯುಗದ ತುಳುನಾಡಿನ ಇತಿಹಾಸದ ಒಂದು ಮಹತ್ವಪೂರ್ಣ ದಾಖಲೆ ಎಂದು ಅಬಿಪ್ರಾಯಪಡುವ ಡಾ ಗಣಪಯ್ಯ ಭಟ್ಟರವರಿಗೆ ಈ ಶಾಸನವನ್ನು ಓದಿ ಅರ್ಥೈಸುವಲ್ಲಿ ಸಂಶೋಧಕ ಚಿತ್ರದುರ್ಗದ ಡಾ ಬಿ.ರಾಜಶೇಖರಪ್ಪ ಅವರ ಸಹಕಾರ ನೀಡಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X