ಮುಂಡಗೋಡ: 150 ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ಗೆ ಸೇರ್ಪಡೆ
.jpg)
ಮುಂಡಗೋಡ, ಸೆ.16: ಕಾಂಗ್ರೆಸ್ ಪಕ್ಷಕ್ಕೆ ಜೆಡಿಎಸ್ ದಿಂದ 150 ಕ್ಕಿಂತ ಹೆಚ್ಚು ಕಾರ್ಯಕರ್ತರನ್ನು ಶಾಸಕ ಶಿವರಾಮ ಹೆಬ್ಬಾರ ಬರಮಾಡಿಕೊಂಡರು.
ಪಟ್ಟಣದ ಇಂದಿರಾ ನಗರದಲ್ಲಿ ಪಕ್ಷಸೇರ್ಪಡೆಕಾರ್ಯಕ್ರಮವನ್ನು ಪಟ್ಟಣಪಂಚಾಯತ್ ಸದಸ್ಯೆ ರಾಮಾಬಾಯಿ ಕುದಳೆ ಅವರ ನೇತೃತ್ವದಲ್ಲಿ ಆಯೋಜಿಸಲಾಗಿತ್ತು.
ಪಕ್ಷಕ್ಕೆ ಸೇರಿಸಿಕೊಂಡು ಮಾತನಾಡಿದ ಶಾಸಕ ಶಿವರಾಮ ಹೆಬ್ಬಾರ, ಕಾಂಗ್ರೆಸ್ ಸರಕಾರ ಎಲ್ಲ ಜಾತಿ ವರ್ಗದವರಿಗೆ ವಿವಿಧಯೋಜನೆಗಳು ತಲುಪಿರುವುದರಿಂದ ಕಾಂಗ್ರೆಸ್ ಪಕ್ಷದ ಮೇಲೆ ವಿಶ್ವಾಸವಿಟ್ಟು ಬೇರೆ ಯಾವುದೇ ಪಕ್ಷದಿಂದ ಅಭಿವೃದ್ಧಿ ಅಸಾಧ್ಯ ಎಂಬ ಮಾತನ್ನು ನಂಬಿ ಕಾಂಗ್ರೆಸ್ ಪಕ್ಷ ಸೇರುತ್ತಿದ್ದಾರೆ.
ಈ ಸಂದರ್ಭದಲ್ಲಿ ಬ್ಲಾಕ್ ಅಧ್ಯಕ್ಷ ರವಿಗೌಡಾ ಪಾಟೀಲ, ಪ.ಪಂ ಸದಸ್ಯರಾದ ರಾಮಾಬಾಯಿ ಕುದಳೆ. ಎಚ್.ಎಂ ನಾಯಕ, ಪಿ.ಎಸ್.ಸಂಗೂರಮಠ, ಪ.ಪಂ ಅಧ್ಯಕ್ಷ ರಫೀಕ್, ಲತೀಫ್ ನಾಲಬಂದ, ಇರ್ಫಾನ್, ಸಂಜು ಪಿಶೆ ಮತ್ತಿತರರಿದ್ದರು.
Next Story





