ಶಿಸ್ತುಬದ್ದ ವಿದ್ಯಾರ್ಥಿಗಳಿಂದ ಆರೋಗ್ಯಪೂರ್ಣ ಸಮಾಜ ನಿರ್ಮಾಣ: ದಾರುಬ್ ಸಿಂಗ್

ಶಿರ್ವ, ಸೆ.17: ದೇಶದ ರಕ್ಷಣೆಯಲ್ಲಿ ತೊಡಗಿರುವ ಯೋಧರ ಬದುಕಿನ ಕಷ್ಟವನ್ನು ಅರಿತುಕೊಂಡರೆ ಪ್ರತಿಯೊಬ್ಬರಲ್ಲಿಯೂ ದೇಶದ ಬಗ್ಗೆ ಕಾಳಜಿ ಅಭಿಮಾನ ಮೂಡಲು ಸಾಧ್ಯವಾಗುತ್ತದೆ. ಸೈನಿಕರಲ್ಲಿರುವ ಶಿಸ್ತು, ಪರಿಶ್ರಮದ ಬದುಕು ನಮ್ಮಲ್ಲಿ ದೇಶಪ್ರೇವವನ್ನು ಪ್ರೇರೇಪಿಸುತ್ತದೆ ಎಂದು 21 ಕರ್ನಾಟಕ ಬೆಟಾಲಿಯನ್ ಎನ್‌ಸಿಸಿ ಉಡುಪಿ ವಿಭಾಗದ ಸುಭೇದಾರ್ ದಾರುಬ್ ಸಿಂಗ್ ಹೇಳಿದ್ದಾರೆ.
ಶಿರ್ವ ವಿದ್ಯಾವರ್ಧಕ ಸೆಂಟ್ರಲ್ ಸ್ಕೂಲ್‌ನಲ್ಲಿ ನೂತನವಾಗಿ ಆರಂಭಿಸಿರುವ ಎನ್‌ಸಿಸಿ ಘಟಕದ ಉದ್ಘಾಟನೆಯನ್ನು ಶನಿವಾರ ನೆರವೇರಿಸಿ ಅವರು ಮಾತನಾ ಡುತಿದ್ದರು. ಎನ್‌ಸಿಸಿ ವಿದ್ಯಾರ್ಥಿಗಳ ಬದುಕಿನಲ್ಲಿ ಶಿಸ್ತು ಮತ್ತು ದೇಶಪ್ರೇಮ ಮುಖ್ಯವಾಗಿರುತ್ತದೆ. ಶಿಸ್ತುಬದ್ದ ವಿದ್ಯಾರ್ಥಿ ಸಮುದಾಯದಿಂದ ಆರೋಗ್ಯ ಪೂರ್ಣ ಸಮಾಜ ನಿರ್ಮಾಣ ಸಾಧ್ಯ ಎಂದರು.
ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷ ಗುರ್ಮೆ ಸುರೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿ ದ್ದರು. ಶಾಲಾ ಸಂಚಾಲಕ ನ್ಯಾಯವಾದಿ ಮಟ್ಟಾರು ರತ್ನಾಕರ್ ಹೆಗ್ಡೆ, ಸಂಸ್ಥೆಯ ಆಡಳಿತಾಧಿಕಾರಿ ಪ್ರೊ.ವೈ.ಭಾಸ್ಕರ ಶೆಟ್ಟಿ, ಪ್ರಾಂಶುಪಾಲ ಪ್ರಶಾಂತ್ ಕುಮಾರ್ ನಂಬಿಯಾರ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಸ್ಪೂರ್ತಿ ಸ್ವಾಗತಿಸಿದರು. ಸಾನಿಯಾ ಮೆಹತಾಬ್ ವಂದಿಸಿದರು. ಪುನೀತ್ ಕಾರ್ಯಕ್ರಮ ನಿರೂಪಿಸಿ ದರು.





