ಸರ್ದಾರ್ ಸರೋವರ್ ಅಣೆಕಟ್ಟಿನ ವಿಶೇಷತೆಗಳಿವು…

1. ಕಾಂಕ್ರಿಟ್‌ನಲ್ಲಿ ನಿರ್ಮಿಸಿದ ವಿಶ್ವದ ಎರಡನೇ ಅತೀ ದೊಡ್ಡ ಅಣೆಕಟ್ಟು. ಕಾಂಕ್ರಿಟ್‌ನಲ್ಲಿ ನಿಮಿಸಿದ ದೇಶದ 3ನೇ ಅತೀ ಎತ್ತರದ ಅಣೆಕಟ್ಟು.
2. 1.2 ಕಿ. ಮೀ. ಉದ್ದ, 163 ಮೀಟರ್ ಆಳವಿದೆ. ಎರಡು ವಿದ್ಯುತ್ ಉತ್ಪಾದನಾ ಕೇಂದ್ರಗಳಿಂದ ಇಲ್ಲಿ ವರೆಗೆ 4,141 ಕೋಟಿ ಯೂನಿಟ್ ವಿದ್ಯುತ್ ಉತ್ಪಾದನೆಯಾಗಿದೆ. ಈ ಎರಡು ಉತ್ಪಾದನಾ ಕೇಂದ್ರಗಳ ಸ್ಥಾಪಿತ ಸಾಮರ್ಥ್ಯ 1,200 ಮೆ.ವ್ಯಾ. ಹಾಗೂ 250 ಮೆ.ವ್ಯಾ.
3. ಈ ಅಣೆಕಟ್ಟು 16,000 ಕೋಟಿ ರೂ. ಆದಾಯ ಗಳಿಸಿದೆ. ಇದು ನಿರ್ಮಾಣದ ವೆಚ್ಚಕ್ಕಿಂತ ಎರಡು ಪಟ್ಟು ಎಂದು ಸರಕಾರದ ವಕ್ತಾರರು ತಿಳಿಸಿದ್ದಾರೆ. ಅಣೆಕಟ್ಟಿನ ಪ್ರತಿ ಗೇಟ್ 450 ಟನ್‌ಗಳಿಗೂ ಅಧಿಕ ಭಾರವಿದೆ. ಇದನ್ನು ಮುಚ್ಚಲು 1 ಗಂಟೆ ಬೇಕಾಗುತ್ತದೆ.
4. ಈ ಅಣೆಕಟ್ಟಿನಿಂದ ಉತ್ಪಾದನೆಯಾಗುವ ವಿದ್ಯುತ್ ಮಧ್ಯಪ್ರದೇಶ, ಗುಜರಾತ್ ಹಾಗೂ ಮಹಾರಾಷ್ಟ್ರಗಳ ನಡುವೆ ಹಂಚಿ ಹೋಗುತ್ತದೆ. ಈ ಅಣೆಕಟ್ಟಿನಿಂದ ಉತ್ಪಾದನೆಯಾಗುವವ ವಿದ್ಯುತ್‌ನ ಶೇ. 57 ಮಹಾರಾಷ್ಟ್ರಕ್ಕೆ ರವಾನೆಯಾಗುತ್ತದೆ. ಮಧ್ಯಪ್ರದೇಶ ಶೇ. 27 ಹಾಗೂ ಗುಜರಾ್ ಶೇ. 16 ವಿದ್ಯುತ್ ಪಡೆಯುತ್ತದೆ.

5. ಜಲಾಶಯದಲ್ಲಿ ನೀರು ಸಂಗ್ರಹವಾಗುವುದನ್ನು ಕೂಡಲೇ ನಿಲ್ಲಿಸಿ ಹಾಗೂ ನೀರಿನ ಮಟ್ಟ ಕಡಿಮೆಯಾಗಲು ಅಣೆಕಟ್ಟಿನ ಗೇಟು ತೆರೆದಿಡಿ ಎಂಬುದು ಹೋರಾಟಗಾರರ ದೀರ್ಘಾವಧಿಯ ಬೇಡಿಕೆ.
6. ಜುಲೈಯಲ್ಲಿ ಅಣೆಕಟ್ಟಿನ ಗೇಟು ಮುಚ್ಚಿದ ಬಳಿಕ ಮಧ್ಯಪ್ರದೇಶದ ಬರ್ವಾನಿ ಹಾಗೂ ಧಾರ್ ಜಿಲ್ಲೆಗಳ ಮುಳುಗಡೆ ಪ್ರದೇಶದಲ್ಲಿ ನೀರಿನ ಮಟ್ಟ ನಿಧಾನವಾಗಿ ಏರುತ್ತಿದೆ. ಜಲಾಶಯದಲ್ಲಿ ಗರಿಷ್ಠ ಸಾಮರ್ಥ್ಯದ ವರೆಗೆ ನೀರು ತುಂಬಿದ ಪರಿಣಾಮ ಮಧ್ಯಪ್ರದೇಶದಲ್ಲಿ 192 ಗ್ರಾಮಗಳ 40,000 ಕುಟುಂಬಗಳು ನಿರ್ವಸಿತವಾಗಿವೆ ಎಂದು ನರ್ಮದಾ ಬಚಾವೊ ಆಂದೋಲನ ಪ್ರತಿಪಾದಿಸಿದೆ. ಸರಕಾರದ ಪ್ರಕಾರ ಈ ಅಣೆಕಟ್ಟಿನಿಂದ 18,386 ಕುಟುಂಬಗಳು ಸಂತ್ರಸ್ತವಾಗಿವೆ.
7. ಹೊಸ ಗೇಟುಗಳು ಅಣೆಕಟ್ಟಿನಷ್ಟು ಎತ್ತರಕ್ಕೆ ಅಂದರೆ 138.68 ಮೀಟರ್‌ಗೆ ಏರಲಿದೆ. ಗೇಟ್‌ಗಳನ್ನು ಮುಚ್ಚಲು ನರ್ಮದಾ ನಿಯಂತ್ರಣ ಪ್ರಾಧಿಕಾರ ಾಜ್ಯ ಸರಕಾರಕ್ಕೆ ಅನುಮತಿ ನೀಡಿದೆ.
8. ಸರ್ದಾರ್ ಸರೋವರ್ ಅಣೆಕಟ್ಟು ನಿರ್ಮಾಣದಿಂದ ಸಂತ್ರಸ್ತರಾದ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸುವಂತೆ ಸಾಮಾಜಿಕ ಹೋರಾಟಗಾರ್ತಿ ಮೇಧಾ ಪಾಟ್ಕ್ ಈಗಲೂ ಹೋರಾಟ ನಡೆಸುತ್ತಿದ್ದಾರೆ.
9. ಈ ಯೋಜನೆ ಪೂರ್ಣಗೊಂಡಿಲ್ಲ. ಕಳೆದ 22 ವರ್ಷಗಳಿಂದ ಬಿಜೆಪಿ ಆಡಳಿತವಿದ್ದರೂ 43,000 ಕಿ.ಮೀ ಉದ್ದದ ಕಾಲುವೆಯನ್ನು ಇದುವರೆಗೆ ನಿರ್ಮಿಸಿಲ್ಲ ಎಂದು ಗುಜರಾತ್ ಕಾಂಗ್ರೆಸ್ ಆರೋಪಿಸಿದೆ.







