ಟ್ರಾಕ್ಸ್ -ಓಮಿನಿ ಢಿಕ್ಕಿ: ಏಳು ಮಂದಿಗೆ ಗಾಯ
ಕೊಲ್ಲೂರು, ಸೆ.17: ಫೋರ್ಸ್ ಟ್ರಾಕ್ಸ್ ಹಾಗೂ ಮಾರುತಿ ಓಮಿನಿ ಕಾರುಗಳ ಮಧ್ಯೆ ಇಂದು ಬೆಳಗ್ಗೆ 10.30ರ ಸುಮಾರಿಗೆ ಕೊಲ್ಲೂರು ಆನೆಜರಿ ಬಳಿ ಸಂಭವಿಸಿದ ಅಪಘಾತದಲ್ಲಿ ಒಟ್ಟು ಏಳು ಮಂದಿ ಗಾಯಗೊಂಡ ಬಗ್ಗೆ ವರದಿಯಾಗಿದೆ.
ಅಪಘಾತದಿಂದ ತೀವ್ರವಾಗಿ ಗಾಯಗೊಂಡಿರುವ ಓಮ್ನಿ ಚಾಲಕ ರಾಮ ಮೂರ್ತಿ(36) ಮಣಿಪಾಲ ಆಸ್ಪತ್ಕೆಯಲ್ಲಿ ಮತ್ತು ಗೀತಾ(31), ಶಕುಂತಳಾ ಶ್ರಾವಣಿ(3) ಎಂಬವರು ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ಒಳರೋಗಿ ಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಗದೀಶ್(30), ರತಿ(30), ವಿಜಯ (28), ಸೋನು(4) ಎಂಬವರು ಸಣ್ಣಪುಟ್ಟ ಗಾಯಗೊಂಡಿದ್ದಾರೆ.
ನೇರಳಕಟ್ಟೆಯಿಂದ ಗಧೂರು ದೇವಸ್ಥಾನಕ್ಕೆ ಹೋಗುತ್ತಿದ್ದ ಓಮಿನಿ ಕಾರಿಗೆ ಎದುರಿನಿಂದ ಅಂದರೆ ಕೊಲ್ಲೂರು ಕಡೆಯಿಂದ ಕುಂದಾಪುರ ಕಡೆಗೆ ಬರುತ್ತಿದ್ದ ಟ್ರಾಕ್ಸ್ ವಾಹನ ಢಿಕ್ಕಿ ಹೊಡೆಯಿತೆನ್ನಲಾಗಿದೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





