ಲಾಹೋರ್ ಕ್ಷೇತ್ರಕ್ಕೆ ಉಪಚುನಾವಣೆ

ಲಾಹೋರ್,ಸೆ.17: ಭ್ರಷ್ಟಾಚಾರದ ಪ್ರಕರಣಕ್ಕೆ ಸಂಬಂಧಿಸಿ ಪದಚ್ಯುತಗೊಂಡ ಪಾಕ್ ಪ್ರಧಾನಿ ನವಾಝ್ ಶರೀಫ್ ಅವರ ರಾಜೀನಾಮೆಯ ಹಿನ್ನೆಲೆಯಲ್ಲಿ ತೆರವಾದ ಲಾಹೋರ್ ಸಂಸದೀಯ ಕ್ಷೇತ್ರದ ಸ್ಥಾನದ ಉಪಚುನಾವಣೆ ರವಿವಾರ ನಡೆಯಿತು.
ಪಿಎಂಎಲ್(ಎನ್) ಪಕ್ಷದ ಅಭ್ಯರ್ಥಿಯಾಗಿ ನವಾಜ್ ಶರೀಫ್ ಅವರ ಪತ್ನಿ ಕುಲ್ಸೂಮ್ ಸ್ಪರ್ಧಿಸಿದ್ದಾರೆ. ಕ್ಯಾನ್ಸರ್ ರೋಗಕ್ಕಾಗಿ ಲಂಡನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರ ಪರವಾಗಿ ಪುತ್ರಿ ಮರಿಯಾಮ್ ಬಿರುಸಿನ ಚುನಾವಣಾ ಪ್ರಚಾರ ನಡೆಸಿದ್ದರು.
ಪಿಎಂಎಲ್-ಎನ್ ಪಕ್ಷದ ಅಭ್ಯರ್ಥಿ ಕುಲ್ಸೂಮ್‌ಗೆ, ಇಮ್ರಾನ್ ಖಾನ್ ನೇತೃತ್ವದ ತೆಹ್ರಿಕೆ ಇನ್ಸಾಫ್ ಪಕ್ಷದ ಅಭ್ಯರ್ಥಿ ಯಾಸ್ಮಿನ್ ರಶೀದ್ ಪ್ರಬಲ ಎದುರಾಳಿಯಾಗಿದ್ದಾರೆ. ಆದಾಗ್ಯೂ ಉಪಚುನಾವಣೆಯಲ್ಲಿ ಪಿಎಂಎಲ್ ಜಯಗಳಿಸುವುದು ಖಚಿತವೆಂದು ಬಹುತೇಕ ರಾಜಕೀಯ ಸಮೀಕ್ಷೆಗಳು ಭವಿಷ್ಯಟ ನುಡಿದಿವೆ.
Next Story





