ದಾವಣಗೆರೆ: ಸಂವಾದ ಕಾರ್ಯಕ್ರಮ

ದಾವಣಗೆರೆ, ಸೆ.17: ನಗರದ ದೇವರಾಜ್ ಅರಸ್ ಬಡಾವಣೆಯ ಗ್ಲೋಬಲ್ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಪೀಪಲ್ಸ್ ಲಾಯರ್ಸ್ ಗಿಲ್ಡ್ ವತಿಯಿಂದ ಆಯೋಜಿಸಿದ ಸಂವಾದ ಕಾರ್ಯಕ್ರಮದಲ್ಲಿ ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಪಾಲ್ಗೊಂಡು ತಮ್ಮ ಬಾಲ್ಯ ಹಾಗೂ ವೃತ್ತಿಪರ ಅನುಭವ ಹಂಚಿಕೊಂಡು ವಕೀಲರೊಂದಿಗೆ ಸುಮಾರು ವಿಚಾರಗಳ ಬಗ್ಗೆ ಸಂವಾದ ನಡೆಸಿದರು.
ಪೀಪಲ್ಸ್ ಲಾಯರ್ಸ್ ಗಿಲ್ಡ್ ಒಂದು ಸಮಾಜಿಕ ಕಳಕಳಿಯುಳ್ಳ ವಕೀಲರ ತಂಡವಾಗಿದ್ದು, ಶೋಷಿತರ ಪರವಾಗಿ ಧ್ವನಿ ಎತ್ತಿ ನ್ಯಾಯದೊರಕಿಸಲು ಶ್ರಮಪಡುತ್ತಿರುವುದು ಶ್ಲಾಘನೀಯ ಕೆಲಸವೆಂದು ಸಂತೋಷ ವ್ಯಕ್ತಪಡಿಸಿ, ಪ್ರಸ್ತುತ ದಿನಗಳಲ್ಲಿ ಇನ್ನೂ ಹೆಚ್ಚಿಗೆ ಶೋಷಿತರ ಪರವಾಗಿ ಹೋರಾಡಬೇಕೆಂದು ಹಾರೈಸಿದರು.
ಪೀಪಲ್ಸ್ ಲಾಯರ್ಸ್ ಗಿಲ್ಡ್‍ನ ರಾಜ್ಯ ಸಂಚಾಲಕ ಅನೀಸ್ ಪಾಷ ಮಹಾದಾಯಿ ಮತ್ತು ಕಾವೇರಿ ಸಮಸ್ಯೆ ಇತ್ಯರ್ಥಗೊಳಿಸಲು ಸೂಕ್ತವಾದ ಪರಿಹಾರಯಾವುದೆಂಬ ಪ್ರಶ್ನೆಗೆ ಉತ್ತರಿಸುತ್ತಾ, ನೀರಿನ ಸಮಸ್ಯೆ ಬಹಳ ಜಟಿಲವಾದ ಸಮಸ್ಯೆಯಾಗಿದ್ದು ಸಂಬಂಧ ಪಟ್ಟ ರಾಜ್ಯಗಳು ಪರಸ್ಪರ ಚರ್ಚಿಸಿ ಸಂಧಾನದ ಮೂಲಕ ಬಗೆಹರಿಸುವುದು ಸೂಕ್ತವೆಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ವಕೀಲರಾದ ಅಬ್ದುಲ್ ಸಮದ್, ನೂರುಲ್ ಹಮೀದ್, ರಂಗನಾಥ, ಗೋಪಾಲ್, ಮಂಜುಳ, ಜೋತಿ, ಹನೀಫ್, ಅಬ್ದುಲ್ ಖಾದರ್, ಶುಭ ಉಪಸ್ಥಿತರಿದ್ದರು.







