ಪಶು, ಆಡು, ಕೋಳಿ ಸಾಕಣೆ ಬಗ್ಗೆ ಉಚಿತ ತರಬೇತಿ
ಮಂಗಳೂರು: ಸೆ 18, ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ವತಿಯಿಂದ ಐ.ಸಿ.ಎ.ಆರ್. ಕೃಷಿ ವಿಜ್ಞಾನ ಕೇಂದ್ರ ದ.ಕ ಇವರ ಸಹಯೋಗದಲ್ಲಿ ದನ, ಆಡು, ಮತ್ತು ಕೋಳಿ ಸಾಕಣೆ ಬಗ್ಗೆ ಉಚಿತ ತರಬೇತಿಯು ಸೆ. 26ರಂದು ಬೆಳಗ್ಗೆ ಗಂಟೆ 10ಗಂಟೆಗೆ ಬಿ.ಸಿ.ರೋಡ್ನ ರಿಕ್ಷಾ ಭವನದಲ್ಲಿ ನಡೆಯಲಿದೆ.
ಪಶುವೈದ್ಯ ವಿಜ್ಞಾನಿ ಡಾ. ರಶ್ಮಿ ಅವರು ತರಬೇತುದಾರರಾಗಿ ಭಾಗವಹಿಸಲಿದ್ದಾರೆ. ಅಲ್ಲದೆ ಪಶುಸಂಗೋಪನಾ ಇಲಾಖೆಯಿಂದ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಲಾಗುವುದು.
ಈ ತರಬೇತಿಯು ಸ್ವ ಉದ್ಯೋಗಕ್ಕೆ ಬಹಳಷ್ಟು ಸಹಕಾರಿಯಾಗಿದ್ದು, ಆಸಕ್ತರು ಇದರ ಸಂಪೂರ್ಣ ಪ್ರಯೋಜನ ಪಡೆಯುವಂತೆ ಟಿ.ಆರ್.ಎಫ್ನ ಕಾರ್ಯಕ್ರಮ ಸಂಯೋಜಕ ಮುಹಮ್ಮದ್ ಯು.ಬಿ. ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ನೋಂದಣಿ ಮತ್ತು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ: ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್, ವಿಶ್ವಾಸ್ ಕ್ರೌನ್, ಕಂಕನಾಡಿ ಮಂಗಳೂರು-2, ಮೊಬೈಲ್: 9972283365, 8951517480
Next Story