ಇನ್ಫೋಸಿಸ್ ನ ಹಿರಿಯ ಉಪಾಧ್ಯಕ್ಷ ಸಂಜಯ್ ರಾಜಗೋಪಾಲನ್ ರಾಜೀನಾಮೆ

ಬೆಂಗಳೂರು, ಸೆ.18: ಇನ್ಫೋಸಿಸ್ ನ ಸಿಇಒ ಹುದ್ದೆಗೆ ವಿಶಾಲ್ ಸಿಕ್ಕಾ ರಾಜೀನಾಮೆ ಘೋಷಿಸಿದ ಒಂದು ತಿಂಗಳ ನಂತರ ಇನ್ಫೋಸಿಸ್ ನ ಹಿರಿಯ ಉಪಾಧ್ಯಕ್ಷ ಸಂಜಯ್ ರಾಜಗೋಪಾಲನ್ ತಮ್ಮ ಹುದ್ದೆಗೆ ರಾಜೀನಾಮೆ ಘೋಷಿಸಿದ್ದಾರೆ.
ವಿಶಾಲ್ ಸಿಕ್ಕಾ ರಾಜೀನಾಮೆಯ ನಂತರ ಸಂಜಯ್ ರಾಜಗೋಪಾಲ್ ಕೂಡ ರಾಜೀನಾಮೆ ಘೋಷಿಸುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಇದೀಗ ತಮ್ಮ ಲಿಂಕ್ಡ್ ಇನ್ ಪ್ರೊಫೈಲ್ ನಲ್ಲಿ ರಾಜಗೋಪಾಲ್ ತಮ್ಮನ್ನು ‘ಸ್ವತಂತ್ರ ವ್ಯಕ್ತಿ’ ಎಂದು ಬಣ್ಣಿಸಿಕೊಂಡಿದ್ದಾರೆ. 2014ರ ಆಗಸ್ಟ್ ನಿಂದ 2017ರ ಸೆಪ್ಟೆಂಬರ್ ವರೆಗೆ ತಾನು ಇನ್ಫೋಸಿಸ್ ನಲ್ಲಿ ಉದ್ಯೋಗದಲ್ಲಿದ್ದೆ ಎಂದವರು ಉಲ್ಲೇಖಿಸಿದ್ದಾರೆ.
Next Story





