ಪರಿಸರ, ನಾಡು ನುಡಿ ರಕ್ಷಣೆ ಎಲ್ಲರ ಜವಾಬ್ಧಾರಿ:ಅಯ್ಯನಗೌಡ

ಮಂಡ್ಯ, ಸೆ.18: ಮದ್ದೂರು ತಾಲೂಕಿನ ಕಡಿಲುವಾಗಿಲು ಗ್ರಾಮದ ಸರಕಾರಿ ಪ್ರೌಢಶಾಲಾ ಆವರಣದಲ್ಲಿ ನಮ್ ಕರ್ನಾಟಕ ಸೈನ್ಯ ಸಂಘಟನೆ ಸೋಮವಾರ ಕನ್ನಡಕುಲ ಪುರೋಹಿತ ಆಲೂರು ವೆಂಕಟರಾಯರ ಜನ್ಮದಿನೋತ್ಸವ-2017 ಮತ್ತು ವನಮಹೋತ್ಸವ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡದ ಕೆ.ಎಂ.ದೊಡ್ಡಿ ಪಿಎಸ್ಸೈ ಅಯ್ಯನಗೌಡ, ಪರಿಸರ ಮತ್ತು ನಾಡು-ನುಡಿ ಸಂರಕ್ಷಣೆ ನಮ್ಮೇಲ್ಲರ ಜವಬ್ದಾರಿಯಾಗಿದೆ. ಭೂಮಿಯ ಮೇಲಿನ ಜೀವಸಂಕುಲ ಸಮೃದ್ಧ ಜೀವನ ನಡೆಸಲು ಪ್ರಕೃತಿ ರಕ್ಷಣೆ ಬಹಳ ಅಗತ್ಯ ಎಂದರು.
ಚಲನಚಿತ್ರ ನಿರ್ದೇಶಕ ಅಭಿಗೌಡ ಹನಕೆರೆ ಮಾತನಾಡಿ, ಯುವಕರಲ್ಲಿ ಸಂಘಟನೆ ಮನೋಭಾವ ತುಂಬ ಅವಶ್ಯವಾಗಿದೆ, ಹೋರಾಟದ ಜೀವನದಲ್ಲಿ ಇಂತಹ ಸಾಂಸ್ಕೃತಿಕ ಕಾರ್ಯತತ್ಪರತೆ ಇರಬೇಕು. ವಿದ್ಯಾರ್ಥಿಗಳಿಗೆ ಪರಿಸರ, ನಾಡು-ನುಡಿ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಅಭಿನಂದಿಸಲಾಯಿತು. ವಿದ್ಯಾರ್ಥಿಗಳು ಜಾನಪದ ನೃತ್ಯ, ರೂಪಕ ಗೀತೆಗಳು, ದೇಶಭಕ್ತಿ ನೃತ್ಯ ಸೇರಿವಂತೆ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶಿಸಿದರು.
ರೈತಸಂಘಟದ ಮುಖಂಡ ಕೋಣಸಾಲೆ ನರಸರಾಜು, ಪ್ರಗತಿಪರ ಹೋರಾಟಗಾರ ಎಂ.ಬಿ.ನಾಗಣ್ಣಗೌಡ, ನಮ್ ಕರ್ನಾಟಕ ಸೈನ್ಯ ಸಂಘಟನೆಯ ರಾಜ್ಯಾಧ್ಯಕ್ಷ ರುಚಿತ್‍ಕುಮಾರ್, , ಚಲನಚಿತ್ರ ನಿರ್ಮಾಪಕ ಕುಮಾರ್, ಕೆ.ಎಚ್, ರಕ್ಷೀತ್ ಕುಮಾರ್, ಪವನ್‍ಕುಮಾರ್, ರಾಘವೇಂದ್ರ, ಇತರರು ಉಪಸ್ಥಿತರಿದ್ದರು.







