ರಾಷ್ಟ್ರೀಯ ಸಾಂಬರು ಬೆಳೆಗಳ ಉದ್ಯಾವನ ಸತಾಪಿಸಲು ಮನವಿ

ಚಿಕ್ಕಮಗಳೂರು, ಸೆ.18:ರಾಷ್ಟ್ರೀಯ ಸಾಂಬರು ಬೆಳೆಗಳ ಉದ್ಯಾವನವನ್ನು ಚಿಕ್ಕಮಗಳೂರು ಜಿಲ್ಲೆಯಲ್ಲಿ ಸ್ಥಾಪಿಸಲು 100 ಕೋಟಿ ರೂ.ಗಳ ಬೇಡಿಕೆಯನ್ನು ಸೋಮವಾರ ಕೇಂದ್ರ ಸಾಂಬರು ಮಂಡಳಿ ಅಧ್ಯಕ್ಷ ಜಯತಿಲಕ್‍ರಿಗೆ ರಾಜ್ಯ ಸಾಂಬರು ಮಂಡಳಿ ನಿರ್ದೇಶಕ ಜಿ.ಬಿ.ಪವನ್ ಮನವಿ ಮಾಡಿದರು.
ಅವರು ಸೋಮವಾರ ಕೊಚ್ಚಿನ್‍ನ ಕೇಂದ್ರ ಸಾಂಬರು ಮಂಡಳಿಯಲ್ಲಿ ಅಧ್ಯಕ್ಷ ಜಯತಿಲಕ್ ರವರನ್ನು ಭೇಟಿ ಮಾಡಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಾಂಬರು ಬೆಳೆ ಕೃಷಿಗೆ ಉತ್ತಮವಾದ ವಾತಾವರಣವಿದೆ. ರೈತರು ಸಾಂಬಾರು ಬೆಳೆಗಳಾದ ಶುಂಠಿ, ಕಾಳು ಮೆಣಸು, ಏಲಕ್ಕಿ, ಒಣ ಮೆಸಿನಕಾಯಿ ಇತ್ಯಾದಿ ಅನೇಕ ಸಾಂಬರು ಬೆಳೆಗಳನ್ನು ಜಿಲ್ಲೆಯ ಮಲೆನಾಡು ಹಾಗೂ ಅರೆ ಮಲೆನಾಡು ಹಾಗೂ ಬಯಲು ಸೀಮೆ ಪ್ರದೇಶಗಳಲ್ಲಿ ಬೆಳೆಯಲು ವಿಶೇಷ ಆಸಕ್ತಿಯನ್ನು ಹೊಂದಿದ್ದು ಸಾಂಬಾರು ಬೆಳೆಗೆ ಹೊಸ ಕೃಷಿ ವಿಧಾನಗಳನ್ನು ತಿಳಿಸಿಕೊಳ್ಳಬೇಕಾಗಿದೆ.
ಈ ಹಿನ್ನಲೆಯಲ್ಲಿ ಸಾಂಬಾರು ಬೆಳೆಗಳ ಬೆಳೆ ವಿಸ್ತರಣೆ ಮತ್ತು ಸಾಂಬಾರು ಕೃಷಿಯಲ್ಲಿ ಹೊಸ ಆವಿಷ್ಕಾರಗಳನ್ನು ಮಾಡಲು ಮತ್ತು ಆವಿಷ್ಕಾರಗಳ ಬಗ್ಗೆ ಸ್ಥಳೀಯವಾಗಿ ತಿಳಿದುಕೊಳ್ಳಲು ಅನುಕೂಲವಾಗುವಂತೆ ಚಿಕ್ಕಮಗಳೂರು ಜಿಲ್ಲೆಯಲ್ಲಿ “ ಸಾಂಬಾರು ಬೆಳೆ ರಾಷ್ಟ್ರೀಯ ಉದ್ಯಾವನ” ನಿರ್ಮಾಣ ಮಾಡಲು 100 ಕೋಟಿ ರೂ. ಅನುದಾನವನ್ನು ಕೇಂದ್ರ ಮಂಡಳಿ ವತಿಯಿಂದ ನೀಡಬೇಕಾಗಿ ಕೋರಿದ್ದಾರೆ.
ಸ್ಪೈಸ್ ವಾರ್ಕ್‍ನ ಮೂಲಕ ಸಾಂಬರು ಬೆಳೆ ಕೃಷಿ ಬಗ್ಗೆ ರೈತರಿಗೆ ಪರಿಣಾಮಕಾರಿಯಾಗಿ ತಿಳಿಸುವ ಮೂಲಕ ರಾಷ್ಟ್ರದ ಅಭಿವೃದ್ಧಿಗೆ ಕಾರಣೀಭೂತರಾಗುವಂತೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ರಾಜ್ಯ ಸಾಂಬಾರು ಮಂಡಳಿ ಅಧ್ಯಕ್ಷೆ ಶಶಿಕಲಾ ವಿ.ಕವಲಿ, ನಿರ್ದೇಶಕರಾದ ಬಿ.ವೈ.ನಾಟೀಲ್ ಅತಾವುಲ್ಲ, ಕೇಂದ್ರ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಎಸ್.ಸಿದ್ರಾಮಪ್ಪ, ಅಧಿಕಾರಿ ರಮಾಶ್ರೀ, ರಾಜ್ಯ ಮಂಡಳಿ ಅಧಿಕಾರಿಗಳಾದ ಉಮೇಶ್ ಮಿರ್ಜಿ, ಪ್ರಭುರಾಜ್ ಉಪಸ್ಥಿತರಿದ್ದರು.







