ಭವ್ಯ ಭಾರತದ ನಿರ್ಮಾಣದಲ್ಲಿ ಇಂಜಿನಿಯರ್‍ಗಳು, ವಿದ್ಯಾರ್ಥಿಗಳ ಪಾತ್ರ ಬಹಳ ಮುಖ್ಯ: ಎಂ.ಎ.ನಾಗೇಂದ್ರ

ಚಿಕ್ಕಮಗಳೂರು, ಸೆ.16: ಸರ್ಕಾರಿ ಕೆಲಸಕ್ಕಾಗಿ ಕಾಯದೇ, ಸ್ವಂತವಾಗಿತಮ್ಮ ಬದುಕು ಕಟ್ಟಿಕೊಳ್ಳುವುದರ ಜೊತೆಗೆ ಭವ್ಯ ಭಾರತದ ನಿರ್ಮಾಣಕ್ಕೆ ಇಂದಿನ ಇಂಜಿನಿಯರ್‍ಗಳು ಹಾಗೂ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಮುಂದಾಗಬೇಕೆಂದು ಹಿರಿಯ ಸಿವಿಲ್ ಇಂಜಿನಿಯರ್ ಎಂ.ಎ. ನಾಗೇಂದ್ರ ಹೇಳಿದ್ದಾರೆ.
ಅವರು ನಗರದ ಎಐಟಿ ಕಾಲೇಜು, ಇನ್ಸ್ಟಿಟ್ಯೂಟ್‍ಆಫ್‍ಇಂಜಿನಿಯರ್ಸ್, ದಾವಣಗೆರೆ ಲೋಕಲ್ ಸೆಂಟರ್ ಹಾಗು ಐಎಸ್‍ಟಿಇ ಲೋಕಲ್ ಚಾಪ್ಟರ್ ಸಹಭಾಗಿತ್ವದಲ್ಲಿ ಎಐಟಿ ಕಾಲೇಜಿನಲ್ಲಿ ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯ ಹಾಗೂ ಶಿಕ್ಷಣ ತಜ್ಞ ಸರ್ವಪಲ್ಲಿ ಡಾ. ಎಸ್.ರಾಧಾಕೃಷ್ಣ ಅವರ ಜನ್ಮದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಸಮಾರಂಭದಲ್ಲಿ “ಭವ್ಯ ಭಾರತ ನಿರ್ಮಾಣದಲ್ಲಿ ಇಂಜಿನಿಯರ್‍ಗಳ ಪಾತ್ರ” ವಿಷಯ ಕುರಿತು ಉಪನ್ಯಾಸ ನೀಡುತ್ತಿದ್ದರು.
ಭಾರತೀಯ ಇಂಜಿನಿಯರ್‍ಗಳನ್ನು ಆಧಾರವಾಗಿಟ್ಟುಕೊಂಡು ನೋಡಿದಾಗ ಭಾರತದವರೇ ಆದ ಡಾ.ಹರೀಶ್‍ಹಂಧೆ, ಡಾ. ಗಿರೀಶ್ ಭಾರಧ್ವಾಜ್ ಮತ್ತು ಡಾ. ಇ.ಶ್ರೀಧರನ್ ನಮ್ಮಕಣ್ಮುಂದೆ ಬಂದು ನಿಲ್ಲುತ್ತಾರೆ. ಹಳ್ಳಿ ಜನರ ಬದುಕು ಹಸನಾಗಿಸಲು ಡಾ. ಹರೀಶ್‍ಹಂಧೆ ಅವರ ಸೋಲಾರ್ ದೀಪ ಅಳವಡಿಕೆಯ ಹೊಸ ಆವಿಷ್ಕಾರ ಭಾರತ ದೇಶದಲ್ಲೇ ಮಾದರಿಯಾಗಿದೆ. ಸರ್ಕಾರದಿಂದ ಯಾವುದೇ ನೆರವು ಪಡೆಯದೇ ವಿದ್ಯುತ್ ಸಂಪರ್ಕ ಕಲ್ಪಿಸಲಾಗದ ಗ್ರಾಮೀಣ ಪ್ರದೇಶದ ಕುಗ್ರಾಮಗಳಿಗೆ ಸೋಲಾರ್ ವಿದ್ಯುತ್ ಸಂಪರ್ಕ ಕಲ್ಪಿಸಿದ ಕೀರ್ತಿಡಾ. ಹರೀಶ್‍ಹಂಧೆ ಅವರಿಗೆ ಸಲ್ಲುತ್ತದೆ ಎಂದರು ತಿಳಿಸಿದರು.
ಇವರ ಪರಿಶ್ರಮದ ಹೊಸ ಆವಿಷ್ಕಾರದ ಬೆಳಕು ಜಿಲ್ಲೆಯ ನಕ್ಸಲ್ ಪೀಡಿತ ಪ್ರದೇಶಗಳ ಕುಗ್ರಾಮಗಳಿಗೂ ತಲುಪಿಸುವುದು ಹೆಮ್ಮೆಯ ವಿಷಯ. ದಕ್ಷಿಣಕನ್ನಡ ಜಿಲ್ಲೆಯವರಾದ ಡಾ. ಗಿರೀಶ್ ಭಾರಧ್ವಾಜ್ ಅವರು ಮಲೆನಾಡು, ಕರಾವಳಿ ಪ್ರದೇಶವೆಂದೆಣಿಸದೇ ಸುಮಾರು 450ಕ್ಕೂ ಹೆಚ್ಚು ತೂಗು ಸೇತುವೆ ನಿರ್ಮಾಣ ಮಾಡಿದ ಕೀರ್ತಿ ಡಾ. ಭಾರಧ್ವಾಜ್ ಅವರಿಗೆ ಸಲ್ಲುತ್ತದೆ. ಅತ್ಯಂತ ಕಡಿಮೆ ವೆಚ್ಚದಲ್ಲಿ 160 ರಿಂದ 170 ತೂಗು ಸೇತುವೆ ನಿರ್ಮಾಣ ಮಾಡುವ ಮೂಲಕ ರಸ್ತೆ ಸಂಪರ್ಕವೇಇಲ್ಲದ ಗ್ರಾಮಗಳಿಗೆ ಸಂಪರ್ಕ ಕಲ್ಪಿಸಿದ್ದಾರೆ ಎಂದರು.
ಕೊಂಕಣ ಮೆಟ್ರೋ ಸೇರಿದಂತೆ ದೆಹಲಿ ಹಾಗೂ ಬೆಂಗಳೂರಿನಲ್ಲಿ ಮೆಟ್ರೋ ರೈಲು ನಿರ್ಮಾಣ ಮಾಡಿದ ಕೀರ್ತಿ ನಮ್ಮ ದೇಶದವರೇ ಆದ ಡಾ. ಶ್ರೀಧರನ್ ಅವರಿಗೆ ಸಲ್ಲುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ಸಿವಿಲ್ ಇಂಜಿನಿಯರ್ಸ್ ಮತ್ತು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಹೊಸ ಹೊಸ ಆಲೋಚನೆ, ಆವಿಷ್ಕಾರ, ವಿನ್ಯಾಸ ಮತ್ತು ಸಂಶೋಧನೆಗಳಿಗೆ ಬಳಕೆಯಾಗಬೇಕಾದ ತಮ್ಮ ಪದವಿ ಸರ್ಟಿಫಿಕೇಟ್‍ಗಳು ಕೇವಲ ಹೊಟ್ಟೆ ತುಂಬಿಸಿಕೊಳ್ಳುವ ರೇಷನ್ ಕಾರ್ಡ್‍ಗಳನ್ನಾಗಿಸದೇ ಹೊಸ ಸಂಶೋಧನೆಗಳಿಗೆ ಬಳಸಿಕೊಳ್ಳಬೇಕೆಂದರು.
ಕಾರ್ಯಕ್ರಮವನ್ನು ಎಐಟಿ ಕಾಲೇಜು ಪ್ರಾಂಶುಪಾಲ ಡಾ.ಸಿ.ಕೆ.ಸುಬ್ರಾಯ ಉದ್ಘಾಟಿಸಿದರು. ದಾವಣಗೆರೆ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ಡಿ.ಎಸ್.ಪ್ರಕಾಶ್ ಸಮಾರಂಭದ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಸಿವಿಲ್ ಇಂಜಿನಿಯರಿಂಗ್ ಅಸೋಸಿಯೇಷನ್‍ನ ಅಧ್ಯಕ್ಷ ರಾಘವೇಂದ್ರ ಮಾತನಾಡಿದರು. ಡಾ.ಬಸವರಾಜ್ ಬಣಕಾರ್ ಸ್ವಾಗತಿಸಿದರು. ಡಾ. ಗೋವಿಂದೇಗೌಡ ವಂದಿಸಿದರು. ಜಿ. ರಮೇಶ್ ಅತಿಥಿಗಳನ್ನು ಪರಿಚಯಿಸಿದರು. ಸಿ.ಆರ್.ನಾಗವೇಣಿ ನಿರೂಪಿಸಿದರು.







