ಮೆಡಿಕಲ್ ಸೀಟು ಪಡೆಯಲು ವಿಫಲಳಾದ ಪತ್ನಿಯನ್ನು ಕೊಂದ ನಿರುದ್ಯೋಗಿ ಪತಿ

ಹೈದರಾಬಾದ್, ಸೆ.18: ಮೆಡಿಕಲ್ ಕಾಲೇಜಿನಲ್ಲಿ ಸೀಟು ಪಡೆಯಲು ವಿಫಲಳಾದ ಪತ್ನಿಯನ್ನು ನಿರುದ್ಯೋಗಿ ಪತಿಯೋರ್ವ ಕೊಲೆಗೈದ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ ನಡೆದಿದೆ.
ಈ ಘಟನೆ ಸೋಮವಾರ ಬೆಳಗ್ಗೆ ನಡೆದಿದ್ದು, ಪೊಲೀಸರು ಅನುಮಾನಾಸ್ಪದ ಕೊಲೆ ಪ್ರಕರಣ ದಾಖಲಿಸಿ ಮೃತಪಟ್ಟ ಮಹಿಳೆಯ ಪತಿ ಋಷಿ ಕುಮಾರ್ ನನ್ನು ಬಂಧಿಸಿದ್ದರು.
“2 ವರ್ಷಗಳ ಹಿಂದೆ ಇಬ್ಬರು ಮದುವೆಯಾಗಿದ್ದರು. ಒಂದು ವರ್ಷದಿಂದ ಹಾರಿಕಾ ವೈದ್ಯಕೀಯ ಪ್ರವೇಶ ಪರೀಕ್ಷೆಗಾಗಿ ಸಿದ್ಧತೆ ನಡೆಸುತ್ತಿದ್ದರು. ಆದರೆ ಅವರಿಗೆ ಸೀಟು ಸಿಕ್ಕಿರಲಿಲ್ಲ. ಆಕೆಯ ಪತಿ ನಿರುದ್ಯೋಗಿಯಾಗಿದ್ದ. ಸೀಟು ಸಿಗದಿದ್ದಲ್ಲಿ ವಿಚ್ಛೇದನ ನೀಡುವುದಾಗಿಯೂ ಆತ ಬೆದರಿಸುತ್ತಿದ್ದ. ಈ ಬಗ್ಗೆ ಹಾರಿಕಾ ಪೋಷಕರಿಗೆ ತಿಳಿಸಿದ್ದರು. ಮೆಡಿಕಲ್ ಸೀಟು ಸಿಗದೇ ಇದ್ದುದರಿಂದ ಆತ ಹಾರಿಕಾರನ್ನು ಕೊಂದಿದ್ದಾನೆ” ಎಂದು ಎಸಿಪಿ ವೇಣುಗೋಪಾಲ್ ರಾವ್ ಹೇಳಿದ್ದಾರೆ.
ಆತ ವರದಕ್ಷಿಣೆ ನೀಡುವಂತೆಯೂ ಪೀಡಿಸುತ್ತಿದ್ದ. ಖಾಸಗಿ ಕಂಪೆನಿಯೊಂದರಲ್ಲಿ ಇತ್ತೀಚೆಗಷ್ಟೇ ಕೆಲಸ ಕಳೆದುಕೊಂಡಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.





