ಜಿಎಸ್‌ಟಿ, ನೋಟು ನಿಷೇಧ ಜಿಡಿಪಿ ಇಳಿಕೆಗೆ ಕಾರಣ: ಮನಮೋಹನ್ ಸಿಂಗ್

ಹೊಸದಿಲ್ಲಿ, ಸೆ. 18: ಜಿಡಿಪಿ ಬೆಳವಣಿಗೆ ಮೇಲೆ ದುಷ್ಪರಿಣಾಮ ಬೀರಿದ ಜಿಎಸ್‌ಟಿಯ ಆತುರದ ಅನುಷ್ಠಾನ ಹಾಗೂ ನೋಟು ನಿಷೇಧದ ಬಗ್ಗೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸೋಮವಾರ ಮತ್ತೆ ಎಚ್ಚರಿಕೆ ನೀಡಿದ್ದಾರೆ.
ನೋಟು ನಿಷೇಧದಿಂದ ಶೇ. 2 ಜಿಡಿಪಿ ಇಳಿಕೆಯಾಗಲಿದೆ ಎಂದು ಅದಾಗಲೇ ಎಚ್ಚರಿಸಿದ್ದ ಸಿಂಗ್, ನೋಟು ನಿಷೇಧದ ಸಂದರ್ಭ ಚಲಾವಣೆಯಲ್ಲಿದ್ದ ಶೇ. 86 ನೋಟುಗಳನ್ನು ಹಿಂದೆ ತೆಗೆದುಕೊಳ್ಳಲಾಗಿತ್ತು. ಜಿಎಸ್‌ಟಿಯ ಆತುರದ ಅನುಷ್ಠಾನದಿಂದ ಅನೌಪಚಾರಿಕೆ ಹಾಗೂ ಸಣ್ಣ ಮಟ್ಟದ ವಲಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ ಎಂದಿದ್ದಾರೆ.
ನೋಟು ನಿಷೇಧ ಹಾಗೂ ಜಿಎಸ್‌ಟಿಯಿಂದ ಕೆಲವು ದುಷ್ಪರಿಣಾಮ ಉಂಟಾಗಿದೆ. ಇವೆರೆಡರಿಂದ ಅನೌಪಚಾರಿಕ ವಲಯ ಹಾಗೂ ಸಣ್ಣ ಮಟ್ಟದ ವಲಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಭಾರತದಲ್ಲಿ ಶೇ. 90ರಷ್ಟು ಉದ್ಯೋಗ ಅವಕಾಶ ಅನೌಪಚಾರಿಕ ವಲಯದಲ್ಲಿದೆ ಎಂದು ಅವರು ಹೇಳಿದ್ದಾರೆ.
ಚಲಾವಣೆಯಲ್ಲಿದ್ದ ಶೇ. 86 ನೋಟುಗಳನ್ನು ಹಿಂದೆ ಪಡೆದಿರುವುದು ಹಾಗೂ ಜಿಎಸ್‌ಟಿಯ ಅನುಷ್ಠಾನದಿಂದ ಈಗ ಹಲವು ತೊಂದರೆಗಳು ಕಾಣಿಸಿಕೊಳ್ಳುತ್ತಿವೆ. ಇದು ಜಿಡಿಪಿ ಇಳಿಕೆಯಾಗಲು ಕಾರಣವಾಯಿತು ಎಂದು ಮನಮೋಹನ್ ಸಿಂಗ್ ಹೇಳಿದ್ದಾರೆ.







