ಹನೂರು : ವಿವಿಧ ಕಾಮಗಾರಿಗಳಿಗೆ ಚಾಲನೆ

ಹನೂರು,ಸೆ.18:ಚೆಕ್‍ಡ್ಯಾಂ ನಿರ್ಮಿಸುವುದರಿಂದ ಅಂತರ್ಜಲ ಪ್ರಮಾಣ ಹೆಚ್ಚಾಗಿಲಿದ್ದು ರೈತರಿಗೆ ತಮ್ಮ ಜಮೀನುಗಳಿಗೆ ನೀರಿನ ಪ್ರಮಾಣ ಹೆಚ್ಚಾಗುತ್ತದೆ ಮತ್ತು ಜಾನುವಾರುಗಳಿಗೂ ಸಹ ಕುಡಿಯಲು ನೀರು ಸಂಗ್ರಹವಾಗಲಿದೆ ಎಂದು ಶಾಸಕ ಆರ್ ನರೇಂದ್ರ ರಾಜೂ ಗೌಡ ತಿಳಿಸಿದರು.
ಲೋಕ್ಕನಹಳ್ಳಿ ಜಿಲ್ಲಾ ಪಂಚಾಯತ್ ಕಂಡ್ಯಾಯನಪಾಳ್ಯ ,ದೂಡ್ಡಮಾಲಾಪುರ ,ಹೋಸಪೋಡು, ಬೂದಿಪಡಗ, ಗುಂಡಿಮಾಳ ಗ್ರಾಮಗಳಲ್ಲಿ ಸುಮಾರು 1.25ಕೋಟಿ ರೂ. ವೆಚ್ಚದಲ್ಲಿ ಚೆಕ್‍ಡ್ಯಾಂ. ಹಾಗೂ ಸಿ. ಸಿ ರಸ್ತೆ. ಚರಂಡಿಗಳಿಗೆ ಭೂಮಿಪೂಜೆ ನೇರವೇರಿಸಿ ಮಾತನಾಡಿದ ಅವರು, ಹನೂರು ಕ್ಷೇತ್ರ ವ್ಯಾಪ್ತಿಯಲ್ಲಿ ಕುಡಿಯುವ ನೀರು ,ರಸ್ತೆ ಸೇರಿದಂತೆ ಮೂಲ ಸೌಕರ್ಯಗಳ ಅಬಿವೃದ್ದಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಮಳೆಗಾಲದಲ್ಲಿ ಲಭ್ಯವಾಗುವ ನೀರು ವ್ಯರ್ಥವಾಗಿ ಹರಿದು ಪೊಲಾಗದಂತೆ ತಡೆಗೋಡೆ ನಿರ್ಮಿಸುವುದರಿಂದ ನೀರಿನ ಉಳಿತಾಯ ಮಾಡಬಹುದು ಹಾಗೂ ರೈತರಿಗೆ,ಪ್ರಾಣಿ ಪಕ್ಷಿಗಳಿಗೆ ತಂಬಾ ಅನುಕೂಲವಾಗುತ್ತದೆ ಎಂದರು.
ಗಿರಿಜನರ,ಹಾಡಿಗಳಲ್ಲಿ,ಚರಂಡಿ,ಸಿ.ಸಿರಸ್ತೆಗಳಿಗೆ,ಭೂಮಿಪೊಜೆ : ಕ್ಷೇತ್ರ ವ್ಯಾಪ್ತಿಯ ಹೂಸಪೋಡು,ಬೂದಿಪಡಗ, ಗುಂಡಿಮಾಳಗ್ರಾಮಗಳಲ್ಲಿ ಗಿರಿಜನರು ವಾಸಿಸುವ ಪರಿಶಿಷ್ಟಪಂಗಡಗಳ ಕಾಲೋನಿಗಳಲ್ಲಿ ಕನಿಷ್ಟ ಮೂಲ ಸೌಕರ್ಯಗಳನ್ನು ಕಲ್ಪಿಸಲು ಕಾಂಕ್ರೀಟ್ ರಸ್ತೆ, ಚರಂಡಿಗಳನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಕೌಳಿಹಳ್ಳ ಡ್ಯಾಂ ವಿಕ್ಷಣೆ : ಕ್ಷೇತ್ರ ವ್ಯಾಪ್ತಿಯಲ್ಲಿ ಕಳೆದ ಒಂದು ತಿಂಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಗೆ ಕ್ಷೇತ್ರದ ಬಹತೇಕ ಎಲ್ಲಾ ಜಲಾಶಯಗಳು ಭರ್ತಿಯಾಗಿದ್ದು, ಕೌಳಿಹಳ್ಳ ಜಲಾಶಯವು ಒಟ್ಟು 28 ಅಡಿ ಆಳವಿದ್ದು ಇತ್ತೀಚೆಗೆ ಬಿದ್ದ ಮಳೆಯಿಂದ ನೀರಿನ ಮಟ್ಟ ಹೆಚ್ಚಾಗಿದೆ ಎಂದು ಶಾಸಕರು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯೆ ಮರಗದಮಣಿ ,ತಾಲ್ಲೂಕು ಪಂಚಾಯತ್ ಸದಸ್ಯರಾದ ರುಕ್ಮಿಣಿ , ಗ್ರಾಮ ಪಂಚಾಯತ್ ಅದಕ್ಷ್ಯ ರಂಗಶೆಟ್ಟಿ, ಉಪಾದ್ಯಕ್ಷ ಶ್ರೀಮತಿ ಸುಮತಿ, ದೊರೆಸ್ವಾಮಿ ನಾಯ್ಡು, ವೆಂಕಟಚಾಲ ಗೌಡ, ಮಾದೇಶ್, ರವಿಕುಮಾರ್, ರಾಜೂಗೌಡ, ಫಯಾಜ್ ಇನ್ನಿತರರು ಉಪಸ್ಥಿತರಿದ್ದರು.







