ಗೋವಿನ ಹೆಸರಲ್ಲಿ ಹಿಂಸಾಚಾರ ಬೇಡ: ಮೋಹನ್ ಭಾಗವತ್

ಜೈಪುರ, ಸೆ. 18: ಗೋವನ್ನು ಪೂಜಿಸುವವರು ತಮ್ಮ ಭಾವನೆಗಳಿಗೆ ತೀವ್ರವಾಗಿ ಘಾಸಿ ಆದರೂ ಹಿಂಸಾಚಾರದಲ್ಲಿ ತೊಡಗದಿರಿ ಎಂದು ಆರೆಸ್ಸೆಸ್ ನ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ಜೈಪುರದ ಸಮೀಪದ ಜಮ್ಡೋಲಿಯಲ್ಲಿ ರವಿವಾರ ನಡೆದ ಸಭೆಯ ಸಂದರ್ಭ ಸ್ವಯಂಸೇವಕರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಗೋವುಗಳನ್ನು ಸಾಕುವುದರಿಂದ ನಮಗೆ ಆರ್ಥಿಕವಾಗಿ ಸಹಾಯವಾಗುತ್ತದೆ ಎಂದರು.
ಆರು ದಿನಗಳ ರಾಜಸ್ತಾನ ಪ್ರವಾಸದಲ್ಲಿರುವ ಭಾಗವತ್, ಗೋವನ್ನು ಸಾಕುವವರು ಗೋವನ್ನು ಪೂಜಿಸುತ್ತಾರೆ. ಆದರೆ, ಭಾವನೆಗಳಿಗೆ ಘಾಸಿ ಉಂಟಾದರೂ ಹಿಂಸಾಚಾರಕ್ಕೆ ಇಳಿಯಬಾರದು ಎಂದರು.
Next Story





