ತುರವೇ ಕುತ್ತಾರು ಘಟಕ ಕಚೇರಿಗೆ ದುಷ್ಕರ್ಮಿಗಳಿಂದ ಹಾನಿ

ಮಂಗಳೂರು, ಸೆ. 18: ಕುತ್ತಾರು ಘಟಕದ ತುಳುನಾಡ ರಕ್ಷಣಾ ವೇದಿಕೆಯ ಕಚೇರಿಗೆ ಕಿಡಿಗೇಡಿಗಳು ಹಾನಿಗೊಳಿಸಿರುವ ಘಟನೆ ನಡೆದಿದೆ.
ತುಳುನಾಡ ರಕ್ಷಣಾ ವೇದಿಕೆಯ ಉಳ್ಳಾಲ ವಿಧಾನಸಭಾ ಕ್ಷೇತ್ರದ ಕಚೇರಿಯ ಬಾಗಿಲನ್ನು ಒಡೆಯಲು ಯತ್ನಿಸಿದ್ದಾರೆ. ವಿಫಲವಾದಾಗ ಮುಂಭಾಗದ ಫಲಕವನ್ನು ಹಾನಿಗೊಳಿಸಿದ್ದಾರೆ. ಅಲ್ಲದೆ ತುರವೇ ಹೋರಾಟದ ಸಾಕ್ಷ್ಯಗಳ ಕಟೌಟ್‌ನ್ನು ಹರಿದು ಹಾಕಿದ್ದಾರೆ ಎಂದು ತುರವೇ ಕ್ಷೇತ್ರಾಧ್ಯಕ್ಷ ಸಿರಾಜ್ ಅಡ್ಕರೆ ಆರೋಪಿಸಿದ್ದಾರೆ. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
Next Story





