ಶಂಕಿತ ಅಲ್‌ಖೈದಾ ಭಯೋತ್ಪಾದಕನ ಬಂಧನ

ಹೊಸದಿಲ್ಲಿ, ಸೆ. 18: ಹೊಸದಿಲ್ಲಿಯಿಂದ ಶಂಕಿತ ಅಲ್-ಖೈದಾದ ಉಗ್ರನೋರ್ವನನ್ನು ದಿಲ್ಲಿ ಪೊಲೀಸರು ಬಂಧಿಸಿದ್ದಾರೆ.
ಹೊಸದಿಲ್ಲಿಯ ವಿಕಾಸ್ ಮಾರ್ಗದಲ್ಲಿರುವ ಶಕಾರ್‌ಪುರ್ ಬಸ್ ನಿಲ್ದಾಣದಿಂದ ರವಿವಾರ ದಿಲ್ಲಿ ಪೊಲೀಸ್‌ನ ವಿಶೇಷ ಘಟಕದ ತಂಡ ಶಂಕಿತ ಉಗ್ರ ಶಾಮಿ-ಉರ್-ರೆಹ್ಮಾನ್ ಅವರನ್ನು ಬಂಧಿಸಿತು ಎಂದು ಪೊಲೀಸರು ತಿಳಿಸಿದ್ದಾರೆ.
ಪಿಸ್ತೂಲ್, 9 ಎಂಎಂ ಕಾಟ್ರಿಜ್‌ಗಳು, ಲ್ಯಾಪ್‌ಟಾಪ್, ಮೊಬೈಲ್‌ಫೋನ್, ಬಾಂಗ್ಲಾದೇಶದ ಸಿಮ್, ವಿದೇಶಿ ಕರೆನ್ಸಿಗಳಾದ ಬಾಂಗ್ಲಾದೇಶದ ಟಾಕಾ, ಅಮೆರಿಕದ ಡಾಲರ್ ಅನ್ನು ಈತನಿಂದ ವಶಪಡಿಸಿಕೊಳ್ಳಲಾಗಿದೆ ಎಂದು ವಿಶೇಷ ಘಟಕದ ಡಿಸಿಪಿ ಪಿ. ಕುಶ್ವಾಹ್ ಹೇಳಿದ್ದಾರೆ.
Next Story





